ಆರ್‌ಬಿಐ ಕಾನೂನು 'ಸಹಕಾರಿ'ಯಾಗಿಲ್ಲ
ಕಡೂರು: ಸಹಕಾರಿ ಕ್ಷೇತ್ರಕ್ಕೆ ಆರ್‌ಬಿಐ ಕಾನೂನು ಮಾರಕವಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಂಜಿ ಶಿವಸ್ವಾಮಿ ಹೇಳಿದರು.
ಪಟ್ಟಣದ ಸೀತಾ- ರಾಘವ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಹೊಸದುರ್ಗದಲ್ಲಿ 1914 ರಿಂದ ಆರಂಭಗೊಂಡ ಸಹಕಾರಿ ಸಂಘವು 1993ರ ವೇಳೆಗೆ ಕೇವಲ 63 ಸಾವಿರ ಬಂಡವಾಳದಿಂದ ವ್ಯವಹಾರ ಆರಂಭಿಸಿ ಪತ್ತಿನ ಸಹಕಾರ ಸಂಘವು ಸೌಹಾರ್ದ ಸಹಕಾರಿ ಬ್ಯಾಂಕಾಗಿ ಬೆಳೆದಿದೆ.
ಇದೀಗ ಭದ್ರಾವತಿ ಮತ್ತು ಕಡೂರು ಪಟ್ಟಣಗಳಲ್ಲಿ ಶಾಖೆ ತೆರೆದು 47 ಕೋಟಿ ವಹಿವಾಟು ನಡೆಸುವ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಯಾವುದೇ ಬ್ಯಾಂಕು ಅಭಿವೃದ್ಧಿ ಹೊಂದಲು ಗ್ರಾಹಕರೆ ಜೀವಾಳ ಮತ್ತು ಬಂಡವಾಳ ಎಂದರು.
ಪ್ರೋತ್ಸಾಹ ಅಗತ್ಯ: ಗ್ರಾಹಕರು ನೀಡುವ ಉತ್ತಮ ಪ್ರೋತ್ಸಾಹ, ಸಲಹೆ, ಸೂಚನೆಗಳಿಂದಾಗಿ ಬ್ಯಾಂಕು ಬೆಳೆಯಲು ಸಾಧ್ಯ. ಗ್ರಾಹಕರು ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿದರೆ ಮತ್ತೊಬ್ಬರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬ್ಯಾಂಕು ಶೇ. 90 ರಷ್ಟು ಉತ್ತಮ ಪ್ರಗತಿಯಿಂದ ಬ್ಯಾಂಕ್ ಲಾಭ ಗಳಿಸಿದೆ ಎಂದರು.
ಆರ್‌ಬಿಐ ಕಾನೂನನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿರುವ ಕಡೂರು ಶಾಖೆಯ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸುತ್ತದೆ ಎಂದರು.
ನಮ್ಮ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಉತ್ತಮ ಸೇವೆ ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲಿ ಎಟಿಎಂ ಸೌಲಭ್ಯ ನೀಡಲಿದೆ ಎಂದರು.
ಜನವರಿ ತಿಂಗಳಲ್ಲಿ ಕೋರ್ ಬ್ಯಾಂಕಾಗಿ ಮಾರ್ಪಡಾಗಲಿದೆ. ಜೊತೆಗೆ ಕಾಲ್ ಮನಿ ಪದ್ಧತಿ ಜಾರಿಗೆ ತಂದು ಸಣ್ಣ- ಪುಟ್ಟ ವರ್ತಕರಿಗೆ ನೆರವು ನೀಡಲು ಯೋಚಿಸಿರುವುದಾಗಿ ತಿಳಿಸಿದರು.
ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಹ್ಲಾದ್, ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು, ವಕೀಲರು, ನೂರಾರು ಗ್ರಾಹಕರು ಈ ವೇಳೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

