'ಕನ್ನಡ ಸಾಹಿತ್ಯದಲ್ಲಿ ಯಕ್ಷಸಾಹಿತ್ಯಕ್ಕೆ ಮನ್ನಣೆಯಿಲ್ಲ'
ಶೃಂಗೇರಿ: ದಾಸ ಸಾಹಿತ್ಯದ ಪ್ರಭಾವದಿಂದ ಹುಟ್ಟಿದ ಯಕ್ಷಕಲೆ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ಶ್ರೀಮಂತ ಕಲೆಯಾಗಿದೆ. ಆದರೆ, ಯಕ್ಷಸಾಹಿತ್ಯಕ್ಕೆ, ಯಕ್ಷಕವಿಗಳಿಗೆ ಸರಿಯಾದ ಮನ್ನಣೆ ದೊರೆತಿಲ್ಲ ಎಂದು ಮಂಗಳೂರಿನ ಯಕ್ಷಗಾನ ಕಲಾವಿದ ಶ್ರೀ ಡಿ.ಎಸ್. ಶ್ರೀಧರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮೆಣಸೆ ರಾಜೀವಗಾಂಧಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯಕ್ಷಸಾಹಿತ್ಯಕ್ಕೆ ಕುಮಾರವ್ಯಾಸ, ಮುದ್ದಣರಂತಹ ಅನೇಕ ಕವಿಗಳು ಅಪಾರ ಕೊಡುಗೆ ನೀಡಿದ್ದರೂ ಅವರನ್ನು ಯಕ್ಷಕವಿಗಳೆಂದು ಗುರುತಿಸಲಾಗಿರುವುದು ದುರಂತವೇ ಸರಿ. ಸುಮಾರು 15 ಸಾವಿರಕ್ಕೂ ಅಧಿಕ ಯಕ್ಷಪದ್ಯ ರಚಿಸಿರುವ ತೀರ್ಥಹಳ್ಳಿ ಹಲಸಿಹಳ್ಳಿ ನರಸಿಂಹಶಾಸ್ತ್ರಿಯವರಂತಹ ಯಕ್ಷ ಕವಿಗಳನ್ನು ಸ್ಮರಿಸದಿರುವುದು ಇಂತಹ ಮಹಾನಿಯರಿಗೆ ಮಾಡಿದ ಅಪಮಾನವಾಗಿದೆ ಎಂದರು.
ಕ್ರಿಸ್ತಪೂರ್ವದಿಂದಲೇ ಜನರು ಕನ್ನಡವನ್ನು ಬಳಸುತ್ತಿದ್ದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಅದ್ಭುತ ನಿರ್ಮಿತಿಯಾಗಿದೆ. ಕನ್ನಡ ಭಾಷೆಯನ್ನು ಕೇವಲ ಸುಶಿಕ್ಷಿತರಷ್ಟೇ ಶ್ರೀಮಂತಗೊಳಿಸಿಲ್ಲ. ಬದಲಾಗಿ ಅಶಿಕ್ಷಿತರಾದಿದ್ದ ಹಳ್ಳಿಯ ಹೆಂಗಸರು ಕೂಡ ಉತ್ತಮಕಾವ್ಯಗಳನ್ನು ಸೃಷ್ಟಿಸಿ ಮಹಾನ್ ಕೊಡುಗೆ ನೀಡಿದ್ದಾರೆ ಎಂದರು.
ಕುವೆಂಪು, ಬೇಂದ್ರೆ, ಮಾಸ್ತಿಯವರಂತಹ ಕವಿಗಳು ಇಂಗ್ಲೀಷ್ ಭಾಷೆಯಲ್ಲಿಯೇ ಸಾಹಿತ್ಯ ರಚಿಸಿದ್ದರೆ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದರು. ಆದರೆ, ಅವರು ಕನ್ನಡ ಸಾಹಿತ್ಯದಲ್ಲಿಯೇ ತೊಡಗಿಸಿಕೊಂಡು ಕನ್ನಡ ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದರು ಎಂದು ಹೇಳಿದರು.
ಪ್ರಾದ್ಯಾಪಕ ರಾಮಚಂದ್ರ ಜೋಯಿಸ್, ಜ್ಯೋತಿಷ್ಯ ಪ್ರಾಧ್ಯಾಪಕ ರಾಮಕೃಷ್ಣ ಪೆಜೆತ್ತಾಯ, ಆಂಗ್ಲ ಪ್ರಾಧ್ಯಾಪಕ ವಿನಯ ಎಂ.ಎಸ್, ಕವಿತಾ ಮತ್ತಿತರರು ಉಪಸ್ಥಿತರಿದ್ದರು.
--
28ರಂದು ಮಂಗಳ ಮಂದಿರ ಉದ್ಘಾಟನೆ
ಶಿವಮೊಗ್ಗ: ರಾಮಾನುಜ ಸೌಹಾರ್ದ ಪತ್ತಿನ ಸಹಕಾರ ಆಲ್ಕೊಳ ವಿಕಾಸ ಪದವಿ ಪೂರ್ವ ಕಾಲೇಜು ಬಳಿ ನಿರ್ಮಿಸಿರುವ ಮಂಗಳ ಮಂದಿರದ ಉದ್ಘಾಟನಾ ಸಮಾರಂಭವನ್ನು ನ. 28ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಯು. ಆರ್. ರಾಮಸ್ವಾಮಿ ಅಯ್ಯಂಗಾರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಿಹರಪುರ ಶ್ರೀಮಠದ ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಂದಿರ ಉದ್ಘಾಟಿಸುವರು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸ್ವರ್ಣ ಸಂಚಿಕೆ ಬಿಡುಗಡೆ ಮಾಡುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್. ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಪಾಲ್ಗೊಳ್ಳುವರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

