ಗ್ರಾಪಂ ಕಾಮಗಾರಿ ಸ್ಥಳ ಬದಲು: ಪ್ರತಿಭಟನೆ
ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟುಕೊಡಿಗೆಯಲ್ಲಿ ಪಂಚಾಯಿತಿ ಸದಸ್ಯೆಯೊಬ್ಬರ ಒತ್ತಡಕ್ಕೆ ಮಣಿದು ಕಾಮಗಾರಿ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಮ್ಮ ಗ್ರಾಮ ನಮ್ಮ ಯೋಜನೆಯಡಿ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟುಕೊಡಿಗೆಯಿಂದ ಸುಮಾರು 16ಕ್ಕೂ ಹೆಚ್ಚು ಗಿರಿಜನರು ವಾಸಿಸುವ ಹಾಡಿ ಮೂಲಕ ಸಾಗುವ ರಸ್ತೆ ಡಾಂಬರೀಕರಣ ಆರಂಭಿಸಲಾಗಿತ್ತು.
ಆದರೆ, ನರಸಿಂಹರಾಜಪುರ ರಸ್ತೆಯ ಆರಂಭದ ಕಡೆಯಿಂದ ಕಾಮಗಾರಿ ಆರಂಭಗೊಳ್ಳುವ ಬದಲು ಆ ಭಾಗದ ಗ್ರಾ.ಪಂ. ಸದಸ್ಯೆಯೊಬ್ಬರ ಮನೆ ಕಡೆಯಿಂದ ಆರಂಭ ಮಾಡಿದ್ದು ವಿವಾದಕ್ಕೆ ಎಡೆ ಮಾಡಿತ್ತು.
ಸ್ಥಳಕ್ಕೆ ಧಾವಿಸಿದ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ವಿಠಲ್ ಮತ್ತು ಜ್ಯೋತಿ ವಿಠಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವಂತೆ ಪಟ್ಟುಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತ ನರಸಿಂಹರಾಜಪುರ ತಹಸೀಲ್ದಾರ್ ಕೂಡಲೇ ಸ್ಥಳಕ್ಕೆ ಸಹಾಯಕ ಅಭಿಯಂತರರನ್ನು ತೆರಳುವಂತೆ ಆದೇಶಿಸಿದರು.
ಬಳಿಕ ಸಹಾಯಕ ಅಭಿಯಂತರರಾದ ವಿರೂಪಾಕ್ಷಪ್ಪ ವಾಟುಕೊಡಿಗೆಗೆ ಆಗಮಿಸಿ ಗ್ರಾಮಸ್ಥರ ನಿಲುವಿನಂತೆ ನರಸಿಂಹರಾಜಪುರ ರಸ್ತೆಯ ಕಡೆಯಿಂದ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸದಸ್ಯೆ ಹೇಮಲತಾ ಪ್ರಭಾಕರ್, ಬಿ.ಕಣಬೂರು ಗ್ರಾ.ಪಂ. ಸದಸ್ಯರಾದ ಮಹಮ್ಮದ್ ಹನೀಫ್, ಬಿ.ಕೆ.ಮಧುಸೂಧನ್, ಗ್ರಾಮಸ್ಥರಾದ ಮಹೇಶ್ ಆಚಾರ್ಯ, ಚಂದ್ರಶೇಖರ್ ಮತ್ತಿತರರು ಸ್ಥಳದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

