ಚಿಕ್ಕಮಗಳೂರು

ಅಧಿವೇಶನದಲ್ಲಿ ಅಡಕೆ ಮಾನ ಎತ್ತಿಹಿಡಿಯಿರಿ: ಪ್ರಕಾಶ ಕಮ್ಮರಡಿ

Published On :

ಕೊಪ್ಪ:  ಈ ಚುನಾವಣೆ ಮುಗಿದ ನಂತರವೇ ಮೊಟ್ಟಮೊದಲ ಲೋಕಸಭಾ ಅಧಿವೇಶನದಲ್ಲಿ ಅಡಕೆ ಬೆಳೆಗಾರರ ಸ್ಥಾನ ಮಾನಕ್ಕೆ ಘಾಸಿ ತಂದಿರುವ ಕೇಂದ್ರದ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ವರದಿಯನ್ನು ಒಮ್ಮತದಿಂದ ತಿರಸ್ಕರಿಸುವ ಚಾರಿತ್ರಿಕ ನಿರ್ಣಯಕ್ಕೆ ಕೇಂದ್ರ ಸರ್ಕಾರ ಪಕ್ಷಬೇಧ ಮರೆತು ಎಲ್ಲಾ ಸಂಸದರು ಬದ್ಧತೆ ಪ್ರದರ್ಶಿಸಬೇಕು ಎಂದು ಕೃಷಿ ವಿಜ್ಞಾನಿ ಪ್ರಕಾಶ ಕಮ್ಮರಡಿ ಒತ್ತಾಯಿಸಿದರು.
ಇಲ್ಲಿನ ರೈತ ಸಂಘದ ಕಚೇರಿಯಲ್ಲಿ ಬುಧವಾರ ಅಡಕೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಚುನಾವಣಾ ಅಭ್ಯರ್ಥಿಗಳಿಗೆ ಒಂದು ಪ್ರಶ್ನಾವಳಿ ಕಿರುಹೊತ್ತಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಿರಸ್ಕಾರಕ್ಕೆ ಯೋಗ್ಯ:  ಅಸ್ತಮಾ ಸೊಸೈಟಿ ಹಾಗೂ ಅಂಕೂರ್ ಗುಟ್ಕಾ ನಡುವಿನ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ 2012 ರಲ್ಲಿ 1300 ಪುಟಗಳ ಅವೈಜ್ಞಾನಿಕ ವರದಿ ಸಲ್ಲಿಸಿದ್ದು ವರದಿಯ ಒಂದು ಭಾಗದಲ್ಲಿ ಅಡಿಕೆ ಹಾನಿಕಾರಕ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರದಿಯ ಆಧಾರದಲ್ಲೇ ಕೇಂದ್ರದ ಹೆಚ್ಚುವರಿ ಪ್ರಧಾನ ಸಲಹೆಗಾರ ಇಂದಿರಾ ಜೈಸಿಂಗ್ 4110.2013 ರಲ್ಲಿ ಲಿಖಿತ ಹೇಳಿಕೆ ನೀಡಿರುವಲ್ಲಿ ಅನುಮಾನ ವಿಲ್ಲಾ ಎಂದಿರುವ ಅವರು ಯಾವುದೇ ಷಡ್ಯಂತ್ರದ ಭಾಗವಾಗಿ ಅವೈಜ್ಞಾನಿತ ವರದಿ ಸಿದ್ಧಗೊಂಡಿದೆ. ಇದು ತಿರಸ್ಕಾರಕ್ಕೆ ಯೋಗ್ಯ ಎಂದರು.
ಘೋರ ಪರಿಣಾಮ:  ರಾಜ್ಯ 175 ತಾಲೂಕುಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. ರಾಷ್ಟ್ರದ ಸಾಂಸ್ಕೃತಿಕ ಮತ್ತು ಸಂಪ್ರಾದಯಿಕ ಸಂಕೇತವಾದ ಅಡಕೆ ನಿಷೇಧವಾಗದಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ಸರ್ವಪಕ್ಷಗಳು ಒತ್ತಡ ಹಾಕಬೇಕು.  ಸರ್ವೋಚ್ಚ ನ್ಯಾಯಾಲಯ ದೇಶದ ವಿವಿಧ ರಾಜ್ಯಗಳಲ್ಲಿರುವ ಅಡಕೆ ಸಂಬಂಧಿತ ಪ್ರಕಾರಣಗಳೇನ್ನೆಲ್ಲಾ ಕ್ರೋಡಿಕರಿಸಿ ತೀರ್ಪೀಗೆ ಬರಲು ಸನ್ನದ್ಧವಾಗಿದ್ದು ವ್ಯತಿರಿಕ್ತ ತೀರ್ಪು ಹೊರಬಂದಲ್ಲಿ ಅಡಕೆ ಬೆಳೆಗಾರರು ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಕೆ.ಸಿ.ಸತೀಶ್, ಮುಖಂಡರಾದ ನವೀನ್ ಕರವಾನೆ, ಕಮಾಲಿಯಾ, ರಾಘವೇಂದ್ರ ಕಾಮತ್, ಹರೀಶ್, ಗಣೇಶ್ ಶೆಟ್ಟಿ, ಅಡಕೆ ಬೆಳೆಗಾರರಾದ ಹಂಚಿಕೊಳಲು ಪ್ರಕಾಶ್, ನೇರೂನ್ನಾ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.