ಅಡಕೆ ಬೆಳೆಗಾರರಿಗೆ ಬಿಜೆಪಿ ಅನ್ಯಾಯ
ಕ.ಪ್ರ.ವಾರ್ತೆ, ಕೊಪ್ಪ, ಏ.14 ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಪ್ರಥಮ ವರದಿ ಸಿದ್ಧಪಡಿಸುವ ಮೂಲಕ ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದ್ದು ಅಂದು ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಎಂಬುದಕ್ಕೆ ತಮ್ಮಲ್ಲಿ ಅಧಿಕೃತ ದಾಖಲೆಯಿದೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ಇಲ್ಲಿನ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮಲ್ಲಿರುವ ದಾಖಲೆ ಪ್ರತಿ ಪ್ರದರ್ಶಿಸಿ ಮಾತನಾಡಿ, 2001 ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಅಡಕೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೇಂದ್ರ ಕೃಷಿ ಸಚಿವಾಲಯ ಡಾ. ರೆತಿನಮ್ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು ಎಂದರು.
11 ಸದಸ್ಯರು: ಆ ಸಮಿತಿಯಲ್ಲಿ ರಾಜ್ಯದಿಂದ ಆಗ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷರಾಗಿದ್ದ ಎಸ್.ಆರ್. ರಂಗಮೂರ್ತಿ, ರಾಮ ಭಟ್, ಅಖಿಲ ಭಾರತ ಅಡಕೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಪೂತ್ತೂರಿನ ಡಾ.ಪಿ.ಕೆ.ಎಸ್. ಭಟ್ ಏಳುಮುಡಿ ಸೇರಿದಂತೆ 11 ಸದಸ್ಯರಿದ್ದರು.
ಈ ತಂಡ ಏಪ್ರಿಲ್ 2001ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಅಡಕೆ ಜಗಿಯುವುದರಿಂದ ಕ್ಯಾನ್ಸರ್ ರೋಗ ಲಕ್ಷಣ ಕಂಡು ಬರುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಡಕೆಯನ್ನು ನಿಷೇಧಿಸುವುದು ಸೂಕ್ತವೆಂದು ಶಿಫಾರಸು ಮಾಡಿದಲ್ಲದೆ, ಮುಂದೊಂದು ದಿನ ಅಡಕೆ ಬೆಳೆ ನಿಷೇಧ ಮಾಡುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಹಣಕಾಸು ಸಂಸ್ಥೆಗಳು ಅಡಕೆ ಅಭಿವೃದ್ಧಿಗೆ ಬೆಳೆಗಾರರಿಗೆ ಹಣಕಾಸು ಸಹಾಯ ನೀಡುವುದನ್ನು ನಿಲ್ಲಿಸುವುದು ಸೂಕ್ತ ಎಂಬ ಸಲಹೆಯನ್ನೂ ನೀಡಿತ್ತು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಮುಖಂಡ ಓಣಿತೋಟ ರತ್ನಾಕರ್, ಶಶಿಕುಮಾರ್, ಮಾಲತಿ, ಸುಬ್ರಮಣ್ಯ, ಎಚ್.ಎಲ್. ದೀಪಕ್, ನಾರ್ವೆ ಅಶೋಕ್, ಅಲ್ತಾಫ್, ಬರ್ಕತ್, ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

