ಚಿಕ್ಕಮಗಳೂರು

ಕ್ಷೇತ್ರದಲ್ಲಿ ದಾಖಲೆಯ ಶೇ. 75 ಮತದಾನ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ. 18
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 75.40 ರಷ್ಟು ಮತದಾನವಾಗಿದೆ. ಕಳೆದ 2012ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶೇ. 68.11 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.75.40 ರಷ್ಟು ಮತದಾನವಾಗಿದೆ. ಒಟ್ಟಾರೆ ಶೇ.7.29 ರಷ್ಟು ಮತದಾನದಲ್ಲಿ ಏರಿಕೆ ಕಂಡು ಬಂದಿದೆ.
ಉಭಯ ಜಿಲ್ಲೆಗಳಲ್ಲಿ ಒಟ್ಟು 13,70,952 ಮತದಾರರು ಇದ್ದು, ಈ ಪೈಕಿ 10,32,871 ಮಂದಿ ಮತ ಚಲಾವಣೆ ಮಾಡಿದ್ದಾರೆ. ಅಂದರೆ, ಶೇ.75.40 ರಷ್ಟು ಮತದಾನವಾಗಿದೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟು ಗೊಳಿಸಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಯಿತು.
ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ಮೊದಲ ಬಾರಿಗೆ ನಡೆದ ಅಂದರೆ 2009ರಲ್ಲಿ ನಡೆದ ಚುನಾವಣೆಯಲ್ಲಿ ಈ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇದ್ದ ಮತದಾರರ ಸಂಖ್ಯೆ 12,23,619, ಈ ಪೈಕಿ 8,34,240 ಮಂದಿ ಮತವನ್ನು ಚಲಾವಣೆ ಮಾಡಿದರು. ಅಂದರೆ ಶೇ. 68.18 ರಷ್ಟು ಮತದಾನವಾಗಿತ್ತು.
ಶೇ.68.11 ಮತದಾನ:  ಆಗ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ವಿ.ಸದಾನಂದಗೌಡ ಜಯಗಳಿಸಿದ್ದರು. ಅವರು ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತವಾದ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತು. ಅದರಿಂದಾಗಿ ಅವರು ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಖಾಲಿಯಾದ ಸ್ಥಾನಕ್ಕೆ 2012ರಲ್ಲಿ ಉಪ ಚುನಾವಣೆ ನಡೆಯಿತು. ಆಗ ಕ್ಷೇತ್ರದಲ್ಲಿ ಇದ್ದ ಮತದಾರರ ಸಂಖ್ಯೆ 12,52,322. ಈ  ಪೈಕಿ 8,52,954 ಮಂದಿ ಮತ ಚಲಾವಣೆ ಮಾಡಿದರು. ಆಗ ಶೇ.68.11 ರಷ್ಟು ಮತದಾನವಾಗಿತ್ತು.
ಈ ಬಾರಿ ನಡೆದ ಚುನಾವಣೆಯ ಮತದಾರರ ಪಟ್ಟಿಯಲ್ಲಿ 13,70,952 ಮತದಾರರು ಇದ್ದು, ಈ ಪೈಕಿ 10,32,871 ಮಂದಿ ಮತ ಹಾಕಿದ್ದಾರೆ. ಅಂದರೆ, ಶೇ.75.40 ರಷ್ಟು ಮತದಾನವಾಗಿದೆ.
ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ.7.29 ರಷ್ಟು ಮತದಾನದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖವಾದ ವಿಷಯವೆಂದರೆ, 2012ರಲ್ಲಿ ಈ ಕ್ಷೇತ್ರದಲ್ಲಿ ಇದ್ದ ಮತದಾರರ ಸಂಖ್ಯೆ 12,52,322. ಈ ಚುನಾವಣೆಯಲ್ಲಿ ಇದ್ದ ಮತದಾರರ ಸಂಖ್ಯೆ 13,70,952. ಅಂದರೆ ಉಭಯ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 1,18,630 ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ. ಮತದಾನ ಹೆಚ್ಚಳಕ್ಕೆ ಮತದಾರರ ಸಂಖ್ಯೆ ಹೆಚ್ಚಳ ಎಂಬ ಕಾರಣವನ್ನು ತಳ್ಳಿ ಹಾಕುವಂತ್ತಿಲ್ಲ.

ವಿಧಾನಸಭಾ ಕ್ಷೇತ್ರವಾರು ವಿವರ
ಕ್ಷೇತ್ರ     ಒಟ್ಟು ಮತದಾರರು     ಚಲಾವಣೆ ಮತ     ಶೇಕಡ
ಕುಂದಾಪುರ     184721     143865     77.88
ಉಡುಪಿ     185892     146650     78.88
ಕಾಪು      160838     126199     78.46
ಕಾರ್ಕಳ    164518     132604     80.60
ಶೃಂಗೇರಿ     153969     118893     77.22
ಮೂಡಿಗೆರೆ      156936      113424      72.27
ಚಿಕ್ಕಮಗಳೂರು     197554     133203     67.43
ತರೀಕೆರೆ     166524     118033     70.88
ಒಟ್ಟು      1370952     1032871     75.40

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.