ಮತದಾನವಾಯ್ತು, ಈಗ ಗೆಲವಿನ ಲೆಕ್ಕಾಚಾರ
ಕ.ಪ್ರ.ವಾರ್ತೆ, ಕಡೂರು, ಏ.18
ಕಳೆದ 24 ದಿನದಿಂದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮುಳುಗಿದ್ದ ಕಡೂರು ಕ್ಷೇತ್ರದ ವಿವಿಧ ಪಕ್ಷಗಳ ನಾಯಕರಿಗೆ ಶುಕ್ರವಾರ ಸ್ವಲ್ಪಮಟ್ಟಿನ ರಿಲ್ಯಾಕ್ಸ್‌ನ ಜೊತೆ ಮನೆ ಸೇರಿದ್ದ ವಿವಿಧ ಪಕ್ಷದ ನಾಯಕರು ಯುದ್ಧದಲ್ಲಿ ಗೆದ್ದಂಥ ಸಂಭ್ರಮದಲ್ಲಿದ್ದರು. ಮತ್ತೆ ಕೆಲವರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಬರಬಹುದಾದ ಮತಗಳ ಅಂದಾಜಿನ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಈ ರೀತಿ ತಮ್ಮ ಗುಣಾಕಾರ ಭಾಗಾಕಾರದ ಲೆಕ್ಕಾಚಾರಗಳಲ್ಲಿ ಮುಳುಗಿದ್ದ ವಿವಿಧ ಪಕ್ಷಗಳ ನಾಯಕರ ಪೈಕಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದು ಹೀಗೆ: ಕ್ಷೇತ್ರದ ಮತದಾರರು ಜೆಡಿಎಸ್ ಪರವಾಗಿ ಮತ ಚಲಾಯಿಸಿದ್ದಾರೆ. ಅದಕ್ಕಾಗಿ ನನ್ನ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ತಮ್ಮ ಪಕ ್ಷದ ಅಭ್ಯರ್ಥಿ ಎ.ಮಂಜು ಅವರ ಪರವಾಗಿ ಪಡೆಯೊಂದಿಗೆ ಕ್ಷೇತ್ರ ಸುತ್ತುವರಿದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಈ ಬಾರಿ ಕ್ಷೇತ್ರದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಜು ಅವರಿಗೆ 10 ಸಾವಿರ ಮತಗಳ ಲೀಡ್ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ಮುಖಂಡರಾದ ಕೆ.ಎಂ. ವಿನಾಯಕ್, ಎಂ.ಎಚ್. ಚಂದ್ರಪ್ಪ, ಕೆ.ಎಸ್. ಆನಂದ್ ಪ್ರತಿದಿನ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಮುಳುಗಿದ್ದರಿಂದ ಸಮಯ ಹೋಗುವುದೇ ತಿಳಿಯುತ್ತಿರಲಿಲ್ಲ. ಚುನಾವಣೆಯಲ್ಲಿ ನಾವು ಮುನ್ನಡೆ ಸಾಧಿಸುವ ಮೂಲಕ ಎ.ಮಂಜು ಅವರಿಗೆ ಗೆಲುವು ಖಚಿತ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿಜೆಪಿಯ ಕಚೇರಿ ಮುಚ್ಚಿದ್ದು, ಪಕ್ಷದ ಮಾಜಿ ಶಾಸಕ ಹಾಗೂ ಮುಖಂಡರಾದ ಡಾ. ವೈ.ಸಿ. ವಿಶ್ವನಾಥ್ ಕಳೆದ ಒಂದು ವಾರದಿಂದ ಪಕ್ಷದ ಅಭ್ಯರ್ಥಿ ಪರ ಕಾಣಿಸಿಕೊಳ್ಳದಿರುವುದು ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

