ಚಿಕ್ಕಮಗಳೂರು

ವರುಣನ ಆರ್ಭಟಕ್ಕೆ ಲಕ್ಷಾಂತರ ರು. ಹಾನಿ

Published On :

ಕ.ಪ್ರ.ವಾರ್ತೆ ್ಣ ತರೀಕೆರೆ ್ಣ ಏ. 19
ಸಮೀಪದ ಕಣಬಗಟ್ಟೆ ಬಳಿಯ ಭರಮನಹಳ್ಳಿ ಮತ್ತು ಸುತ್ತಮುತ್ತ ಗುರುವಾರ, ಶುಕ್ರವಾರ ಎಡಬಿಡದೆ ಬೀಸಿದ ಬಿರುಗಾಳಿ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ಲಕ್ಷಾಂತರ ರು. ಮೌಲ್ಯದ ಬೆಳೆಹಾನಿ ಸಂಭವಿಸಿದೆ.
ಹತ್ತಾರು ಎಕರೆ ತೋಟಗಳಲ್ಲಿ ಬೆಳೆದಿದ್ದ ಬಾಳೆ ಮರಗಳು, ಅಡಕೆ ತೆಂಗು ಮರಗಳು ನೆಲಕ್ಕುರುಳಿದ್ದು, ಫಸಲಿಗೆ ಬಂದಿದ್ದ ಇನ್ನೇನು ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತಿದ್ದ ಲಕ್ಷಾಂತರ ರು. ಬೆಲೆಯ ಬಾಳೆಗೊನೆಗಳು ನೆಲಕಚ್ಚಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಪ್ಪುಗಟ್ಟಿದ ಮೋಡ: ಕಣಬಗಟ್ಟೆ, ಭರಮನಹಳ್ಳಿ ಸುತ್ತಮುತ್ತ ಗುರುವಾರ ಮಧ್ಯಾಹ್ನದಿಂದಲೇ ಮೋಡ ಹೆಪ್ಪುಗಟ್ಟಿತ್ತು. ನಂತರ ಸಾಯಂಕಾಲವಾಗುತ್ತಲೆ ಕಣ್ಣು ಕೋರೈಸುವ ಕೊಲ್ಮಿಂಚು, ಬೆಚ್ಚಿ ಬೀಳಿಸುವ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ಭರಮನಹಳ್ಳಿಯಲ್ಲಿ ಹತ್ತಾರು ಎಕರೆ ತೋಟದಲ್ಲಿ ಕಟಾವು ಹಂತದಲ್ಲಿದ್ದ ಬಾಳೆ ಗಿಡಗಳು ಗೊನೆಸಹಿತ ನೆಲಕಚ್ಚಿದೆ. ಅನೇಕ ಬಾಳೆ ಗಿಡಗಳು ಬಿರುಗಾಳಿಗೆ ಉರುಳಿವೆ. ಅಡಕೆ ಮರ, ತೆಂಗಿನ ಮರಗಳು ಧರೆಗುರುಳಿದೆ. ಭರಮನಹಳ್ಳಿಯಲ್ಲಿ ಇದೇ ರೀತಿ ಇನ್ನು ಅನೇಕ ರೈತರ ತೋಟದಲ್ಲೂ ಬಾಳೆ, ಅಡಕೆ ತೆಂಗು ನಷ್ಟವಾಗಿದೆ. ಮಳೆ, ಗಾಳಿ ರಭಸಕ್ಕೆ ಮನೆ, ಗುಡಿಸಲುಗಳಿಗೂ ನಷ್ಟವಾಗಿದೆ.
ಭೀತಿ ತಪ್ಪಿಲ್ಲ: ನೆಲಕ್ಕುರುಳಿದ ಬಾಳೆಗೊನೆಗಳಿಂದಾಗಿ ಇತ್ತ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಹಾಗಿಲ್ಲ, ಅತ್ತ ಬಿಸಾಡಲು ಮನಸ್ಸಿಲ್ಲದಂತೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ರೈತರು ತಿಳಿಸಿದ್ದು, ಭರಮನಹಳ್ಳಿ ಸುತ್ತಮುತ್ತ ವಾತಾವರಣ ಇದೇ ರೀತಿ ಮುಂದುವರಿದಿದ್ದು, ಮಳೆ- ಗಾಳಿ ಭೀತಿ ತಪ್ಪಿಲ್ಲ ಎಂದು ರೈತರು ತಿಳಿಸಿದ್ದಾರೆ.
5 ದಿನಗಳಿಂದ ಕರೆಂಟಿಲ್ಲ: ಕಳೆದ ಐದು ದಿನಗಳಿಂದ ಭರಮನಹಳ್ಳಿಗೆ ವಿದ್ಯುತ್ ಸರಬರಾಜಿಲ್ಲದೆ, ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗಿದೆ. ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿಲ್ಲ. ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ: ತೋಟಗಾರಿಕೆ ಅಧಿಕಾರಿಗಳು ನಷ್ಟಕ್ಕೊಳಗಾದ ಭರಮನಹಳ್ಳಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.