ತೆರಿಗೆ ಹೆಚ್ಚಳ: ಪಾಲಿಕೆ ವಿರುದ್ಧ ಹೋರಾಟ 29ರಂದು
ಶಿವಮೊಗ್ಗ: ಕಾನೂನು ಸಮ್ಮತವಲ್ಲದ ತೆರಿಗೆ ವಿಧಿಸಿರುವುದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ನೇತೃತ್ವದಲ್ಲಿ ತೆರಿಗೆದಾರರು ಏ.29 ರಂದು ಮಹಾಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಕೈಗೊಂಡಿದ್ದಾರೆ.
ಸೋಮವಾರ ಸಂಜೆ ನಗರದ ಮಥುರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೆರಿಗೆದಾರರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಬೃಹತ್ ಪ್ರತಿಭಟನೆ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಏ.29ರಂದು ನಡೆಯಲಿದ್ದು ಅಂದೇ ಹೋರಾಟ ಹಮ್ಮಿಕೊಳ್ಳುವುದು, ಇಲ್ಲವೇ ಯಾವ ದಿನದಂದು ಸಾಮಾನ್ಯ ಸಭೆ ನಡೆಯುವುದೋ ಅಂದು ಬೃಹತ್ ಹೋರಾಟ ನಡೆಸುವ ಏಕ ಕಂಠದ ಅಭಿಪ್ರಾಯ ವ್ಯಕ್ತವಾಯಿತು.
ಖಾಲಿ ನಿವೇಶನಕ್ಕೆ ವಿಸುತ್ತಿರುವ ತೆರಿಗೆ, ಘನತ್ಯಾಜ್ಯ ವಿಲೇವಾರಿಗೆ ವಿಧಿಸುತ್ತಿರುವ ಶುಲ್ಕ, ಖಾತೆ ಬದಲಾವಣೆಗೆ ಶುಲ್ಕ ಹಾಗೂ ಕುಡಿಯುವ ನೀರಿನ ತೆರಿಗೆ ವಿರುದ್ಧ ಈ ಹೋರಾಟ ನಡೆಯುವುದು.
ಕಾನೂನು ವಿರೋಧಿ: ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಆಯಾ ವಾರ್ಡ್ಗಳಲ್ಲಿ ತೆರಿಗೆದಾರರು ಸ್ಥಳೀಯ ಮಟ್ಟದ ಸಭೆ ನಡೆಸಿ ಪ್ರತೀ ವಾರ್ಡ್ಗಳಿಂದಲೂ ಹೆಚ್ಚಿನ ತೆರಿಗೆದಾರರನ್ನು ಕರೆತರಬೇಕು. ನೇರವಾಗಿಯೇ ನಗರಸಭೆ ಆವರಣಕ್ಕೆ ಬರಬೇಕೆಂದ ಅವರು, ಕಾನೂನು ಸಮ್ಮತವಲ್ಲದ ತೆರಿಗೆಯನ್ನು ತೆಗೆದು ಹಾಕುವ ಬಗ್ಗೆ ಅಜೆಂಡಾದಲ್ಲಿ ಸೇರಿಸುವಂತೆ ಒತ್ತಾಡಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಸಮಾಧಾನ: ಸಭೆಯಲ್ಲಿ ಪಾಲ್ಗೊಂಡ ಬಹುತೇಕ ತೆರಿಗೆದಾರರು ಕೂಡ ಘನತ್ಯಾಜ್ಯ ಶುಲ್ಕ, ಕುಡಿಯು ನೀರಿನ ಕರ ಹೆಚ್ಚಳ, ಖಾಲಿ ನಿವೇಶನ ಸ್ವಚ್ಛತಾ ಶುಲ್ಕ ಹೆಚ್ಚಳ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಭರವಸೆಗಳಿಗೆ ಒಪ್ಪದೇ ತೆರಿಗೆ ಭಾರ ಕಡಿಮೆ ಮಾಡುವವರೆಗೆ ಹೋರಾಟ ಮಾಡಲು ಸಿದ್ಧರಾಗಿ ಬರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ, ಪ್ರಮುಖರಾದ ಡಾ.ಸತೀಶ್ ಕುಮಾರ್ ಶೆಟ್ಟಿ, ಕರಿಯಣ್ಣ , ಎಸ್.ಬಿ.ಅಶೋಕ್ ಕುಮಾರ್ ಮೊದಲಾದವರು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

