ಚಿಕ್ಕಮಗಳೂರು

ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ

Published On :

ತರೀಕೆರೆ: ಸಮೀಪದ ಅಜ್ಜಂಪುರ ಹೋಬಳಿ ಗಡೀಹಳ್ಳಿಯಲ್ಲಿ ಏ. 24ರಿಂದ 29ರ ವರೆಗೆ ಕಂಸಾಗರ ಬೀರಲಿಂಗೇಶ್ವರಸ್ವಾಮಿ, ಕೆರೆಕೋಡಿ ಬೀರಲಿಂಗೇಶ್ವರಸ್ವಾಮಿ, ಮಾದಾಳಯ್ಯ ಬೀರಲಿಂಗೇಶ್ವರಸ್ವಾಮಿ ಮತ್ತು ಚೆನ್ನಬಸವೇಶ್ವರಸ್ವಾಮಿ ತೋಪು ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.
ಏ. 24 ರಂದು ಬೆಳಗ್ಗೆ 9.05ಕ್ಕೆ ಹೊಸದುರ್ಗ ಕಾರೇಹಳ್ಳಿ, ಕಾರೇಹಳ್ಳಿ ಮಹಾಸಂಸ್ಥಾನ, ಚಿಕ್ಕಮಠ ಪರಮೇಶ್ವರ್ ಒಡೆಯರ್, ರೇವಣ್ಣ ಒಡೆಯರ್ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಮಧ್ಯಾಹ್ನ 3ಕ್ಕೆ ಹೊಸದುರ್ಗ ಕಾರೇಹಳ್ಳಿ ಚಿಕ್ಕಮಠ ರೇವಣಸಿದ್ದೇಶ್ವರಸ್ವಾಮಿ, ಸೊಲ್ಲಾಪುರ ಗುರು ಸಿದ್ದರಾಮೇಶ್ವರಸ್ವಾಮಿ, ಚೆನ್ನಸಮುದ್ರ ಸಿದ್ದರಾಮೇಶ್ವರ ಸ್ವಾಮಿ ಮತ್ತು ಅಂತರಗಟ್ಟೆ ಅಂತರಗಟ್ಟಮ್ಮನ ದೇವರನ್ನು ಗಡೀಹಳ್ಳಿ ಗ್ರಾಮಕ್ಕೆ ಸ್ವಾಗತಿಸುವುದು. ರಾತ್ರಿ 9ಕ್ಕೆ ಅಖಂಡ ಭಜನೆ ಏರ್ಪಡಿಸಲಾಗಿದೆ.
ಏ. 25 ಶುಕ್ರವಾರ ಬೆಳಗ್ಗೆ 9ಕ್ಕೆ ಗಡೀಹಳ್ಳಿ ದಳವಾಯಿ ಚನ್ನಬಸಪ್ಪ ಇವರಿಂದ ಮೀಸಲುಗೊಡೆ ಪೂಜೆ ಏರ್ಪಡಿಸಲಾಗಿದೆ.
ಏ. 26ರಂದು ಬೆಳಗ್ಗೆ 10ಕ್ಕೆ ಧಾರ್ಮಿಕ ಗೋಷ್ಠಿ ನಡೆಯಲಿದ್ದು, ಚಿತ್ರದುರ್ಗ ಬೃಹನ್ಮಠ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಅವರು ಅಧ್ಯಕ್ಷತೆ ವಹಿಸುವರು.
ಏ. 27ರಂದು ಬೆಳಗ್ಗೆ 10ಕ್ಕೆ ಧಾರ್ಮಿಕ ಗೋಷ್ಠಿ ನಡೆಯಲ್ಲಿದ್ದು, ಹರಿಹರ ತಾ. ರಾಜನಹಳ್ಳಿ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಹುಣಸಘಟ್ಟ ಹಾಲಸ್ವಾಮಿ ಮಹಾಮಠದ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರು ಉದ್ಘಾಟಿಸುವರು.
ಏ. 28 ರಂದು ಬೆಳಗ್ಗೆ 10ಕ್ಕೆ ಜೋಡೆತ್ತಿನ ಗಾಡಿ ಸ್ಪರ್ಧೆ ಮತ್ತು ಧಾರ್ಮಿಕ ಗೋಷ್ಠಿ ನಡೆಯಲಿದ್ದು, ಕನಕಗುರು ಪೀಠ ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದ ಪುರಿ ಮಾಹಾಸ್ವಾಮೀಜಿ ಸಾನ್ನಿಧ್ಯ ಮತ್ತು ಆಶೀರ್ವಚನ ನೆರವೇರಿಸಿಲಿದ್ದು, ವಿವಿಧ ಮಠಾಧೀಶರು ಧಾರ್ಮಿಕ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಏ. 29 ರಂದು ಬೆಳಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಟಿ.ಎಂ. ಭೋಜರಾಜ್ ಅವರು ವಹಿಸುವರು.  ಅಂದು ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಾತ್ರಾ ಸಮಿತಿ ಅಧ್ಯಕ್ಷ ಜೆ.ಬಿ. ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಸಮಾರಂಭದ ಉದ್ಘಾಟಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.