ಲಕ್ಷ್ಮಿರಂಗನಾಥಸ್ವಾಮಿ ರಥೋತ್ಸವ
ಕನ್ನಡಪ್ರಭ ವಾರ್ತೆ ಟಿ ಬೀರೂರು ಟಿ ಏ.23
ಗಿರಿ ಶಿಖರಗಳ ತಪ್ಪಲಿನಲ್ಲಿ ನೆಲೆಸಿರುವ 800 ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಲಕ್ಷ್ಮಿರಂಗನಾಥ ಸ್ವಾಮಿಯ ಮಹಾ ಬ್ರಹ್ಮ ರಥೋತ್ಸವ ಬುಧವಾರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ವಿಶೇಷವಾಗಿ ರಂಗನಾಥ ಸ್ವಾಮಿಯ ಧ್ವಜಾರೋಹಣ ಗರುಡೋತ್ಸವ, ದಿವ್ಯ ಕಲ್ಯಾಣೋತ್ಸವ, ಕೃಷ್ಣ ಗಂಧೋತ್ಸವ ವಿಶೇಷ ಅಲಂಕಾರ, ರಜತಾಭೀಷೇಕ, ಮಹಾಭಿಷೇಕ, ದಿವ್ಯಾಲಂಕಾರ, ಅರ್ಚನೆ, ಅಷ್ಟೋತ್ತರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ರಥೋತ್ಸವ ನಡೆಯಿತು.
ವಿಶೇಷವೆಂಬಂತೆ ಪ್ರತಿ ವರ್ಷದಂತೆ ರಂಗನಾಥ ಸ್ವಾಮಿಯ ಬಾವುಟ ಹರಾಜಿನಲ್ಲಿ ಭಕ್ತರೊಬ್ಬರಾದ ಕಡೂರಿನ ರವಿ ಅವರು 2.31 ಲಕ್ಷಕ್ಕೆ ಪಡೆದು ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಗೆ ಉತ್ತಮ ಮೊತ್ತ ನೀಡಿದರು.
ಪುಷ್ಪಾಲಂಕೃತಗೊಂಡಿದ್ದ ತೇರನ್ನು ಎಳೆಯುವುದರ ಜತೆ ಬಾಳೆಹಣ್ಣು ಎಸೆದು ಹಣ್ಣು- ಕಾಯಿ ಕೊಟ್ಟು ಭಕ್ತಿ ಸಮರ್ಪಿಸಿದರು. ಶಿವಮೊಗ್ಗದ ಬಸವ ಮರುಳ ಸಿದ್ದೇಶ್ವರ ಮಹಾಸ್ವಾಮೀಜಿ, ತಾಲೂಕು ಪಂಚಾಯಿತಿ ಸದಸ್ಯ ಶಶಿಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಅಶ್ವತ್, ನಾರಾಯಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಿ.ಆರ್. ನಾಗಭೂಷಣ್, ಖಜಾಂಚಿ ಲಕ್ಷ್ಮಿಕಾಂತ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಭಕ್ತಾದಿಗಳು ಹಾಗೂ ಪೂಜಾ ಸಮಿತಿಯ ನಾಗಭೂಷಣ್, ಹಿರಿಯ ಅರ್ಚಕ ಶ್ರೀನಿವಾಸಮೂರ್ತಿ, ರಾಮಚಂದ್ರಪ್ಪ, ನಾರಾಯಣ ಸ್ವಾಮಿ, ಸಂತೋಷ್, ನಾಗರಾಜ್, ರಾಮಣ್ಣ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

