ಕಲಾವಿದರಿಗಾಗಿ ಶೋಧ
ಶಿವಮೊಗ್ಗ: ಈ ಟೀವಿಯಲ್ಲಿ ಪ್ರಸಾರವಾಗುತ್ತಿರುವ 'ಚರಣದಾಸಿ' ಧಾರಾವಾಹಿ ತಂಡವು ಇದೀಗ ಹೊಸತೊಂದು ಧಾರಾವಾಹಿಯನ್ನು ಕಿರುತೆರೆಗೆ ತರುವ ಪ್ರಯತ್ನದಲ್ಲಿದೆ.
ಕಲಾವಿದರು ಹಾಗೂ 18ರಿಂದ 22ರ ವಯೋವಾನದ ಪ್ರಧಾನ ಭೂಮಿಕೆಯ ನಾಯಕಿಗಾಗಿ ಶೋಧ ನಡೆಸುತ್ತಿದ್ದಾರೆ. ಧಾರಾವಾಹಿಯ ಚಿತ್ರೀಕರಣ ತೀರ್ಥಹಳ್ಳಿ ಸುತ್ತಮುತ್ತಲಲ್ಲಿ ನಡೆಯಲಿದೆ.
ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಆಸಕ್ತ ಕಲಾವಿದರು ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತರು ಭಾವಚಿತ್ರ, ವಿವರಗಳೊಂದಿಗೆ ಏ.26 ಶನಿವಾರ ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದ ಆವರಣಕ್ಕೆ ಆಗಮಿಸಬೇಕಾಗಿ ಕೋರಲಾಗಿದೆ. ವಿವರಗಳಿಗಾಗಿ ಮಂಜುನಾಥ್ (ಮೊ. 9632148895), ಯೋಗೀಶ್ (ಮೊ. 9845918757) ಸಂಪರ್ಕಿಸಬಹುದು.
ಇಂದು ನಾಟಕ ಇಲ್ಲ
ಶಿವಮೊಗ್ಗ: ನಗರದ ಕಲಾವಿದರು ಒಕ್ಕೂಟದ ಆಯೋಜಿಸಿರುವ ಶಿವಮೊಗ್ಗ ರಂಗ ಹಬ್ಬ ಯಶಸ್ವಿಯಾಗಿ ನಡೆಯುತ್ತಿದ್ದು, ಕುವೆಂಪು ರಂಗಮಂದಿರದಲ್ಲಿ ಅನ್ಯ ಕಾರ್ಯಕ್ರಮವಿರುವುದರಿಂದ ಏ. 25ರ ಸಂಜೆ ನಾಟಕ ಪ್ರದರ್ಶನ ಇರುವುದಿಲ್ಲ.
ಏ. 26ರಿಂದ ಪುನಃ ಶಿವಮೊಗ್ಗ ರಂಗ ಹಬ್ಬದ ನಾಟಕ ಪ್ರದರ್ಶನಗಳು ಮುಂದುವರಿಯಲಿದೆ. 26ರಂದು ನಮ್ ಹಳ್ಳಿ ಥಿಯೇಟರ್ ತಂಡದಿಂದ ಚೇತನ್ ರಾಯನಹಳ್ಳಿ ನಿರ್ದೇಶನದಲ್ಲಿ ಅಶ್ವಪರ್ವ, ಏ.27 ಅಭಿನಯ ತಂಡದಿಂದ ಹಾಲೇಶಪ್ಪರ ನಿರ್ದೇಶನದಲ್ಲಿ ಪ್ರತಿಜ್ಞಾಯೌಂಗಧರಾಯಣ, ಕೊನೆಯ ದಿನ ಏ. 28ರಂದು ಮಲೆನಾಡು ಕಲಾ ತಂಡದಿಂದ ಗಣೇಶ್ ಕೆಂಚನಾಲ ನಿರ್ದೇಶನದಲ್ಲಿ ಕಳ್ರು ನಾಟಕ ಪ್ರದರ್ಶನಗೊಳ್ಳಲಿವೆ.
ಕಲಾಭಿಮಾನಿಗಳು ಈ ಬದಲಾವಣೆ ಗಮನಿಸಿ ಸಹಕರಿಸಬೇಕಾಗಿ ಸಂಚಾಲಕ ವೈದ್ಯ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

