ಶೂಟೌಟ್ ಪ್ರಕರಣ ವಿರೋಧಿಸಿ ಪ್ರತಿಭಟನೆ
ಮೂಡಿಗೆರೆ: ತನಿಕೋಡು ಚೆಕ್ ಪೋಸ್ಟ್‌ನಲ್ಲಿ ನಡೆದ ಶೂಟೌಟ್ ಪ್ರರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೃತನ ಕುಟುಂಬಕ್ಕೆ50 ಲಕ್ಷ ರು.ಗಳ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಜಾಗೃತ ವಿದ್ಯಾರ್ಥಿ ಯುವ ಜನ ವೇದಿಕೆಯ ಮುಖಂಡ ಅಂಗಡಿ ಚಂದ್ರು ಮಾತನಾಡಿ, ದನಗಳಿಗಿರುವ ಬೆಲೆ ಮನುಷ್ಯನಿಗೆ ಇಲ್ಲದಂತಾಗಿರುವುದನ್ನು ಸಹಿಸಲು ಸಾದ್ಯವಿಲ್ಲ. ಸಂಘ ಪರಿವಾರದ ಪ್ರಚೋಧನೆಯಿಂದ ಎಎನ್‌ಎಫ್ ಸಿಬ್ಬಂಧಿ ಗುಂಡು ಹಾರಿಸಿರುವ ಸಾದ್ಯತೆ ಬಹುತೇಕ ಖಚಿತವಾಗುತ್ತಿದೆ. ಇಲ್ಲದಿದ್ದಿದ್ದರೆ ಗುಂಡೇಟಿಗೆ ಬಲಿಯಾದ ದುಃಖದಿಂದ ಇದ್ದ ಕಬೀರನ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗಿ ದೌರ್ಜನ್ಯ ಎಸಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಫರೂಕ್ ಮಾನಾಡಿ, ಕಬೀರನನ್ನು ಪೂರ್ವಗ್ರಹ ಪೀಡಿತನಾಗಿ ಗುಂಡು ಹೊಡೆದು ಕೊಂದಿರುವ ಶಂಕೆ ಬಲಗೊಳ್ಳುತ್ತಿದೆ ಎಂದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮಾತನಾಡಿ, ದನಸಾಗಾಣಿಕೆ ಅಕ್ರಮವಾಗಿದ್ದರೆ ಕ್ರಮ ಜರುಗಿಸಿ ಜೈಲಿಗಟ್ಟಬಹುದಿತ್ತು. ಆದರೆ ಕೊಲ್ಲುವ ಉದ್ದೇಶದಿಂದಲೇ ಎದೆಗೆ ಗುಂಡು ಹಾರಿಸಲಾಗಿದೆ ಎಂದರು.
ಈ ವೇಳೆ ಎಸ್‌ಡಿಪಿಐ ಪ್ರದಾನ ಕಾರ್ಯದರ್ಶಿ ಅಲ್ತಾಫ್ ಬಳಗುಳ, ಉಪಾಧ್ಯಕ್ಷ ಫೈರೋಝ್, ಮುಹಮ್ಮದ್ ತಮೀಝ್, ಪಿ.ಕೆ.ಹಸನಬ್ಬ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

