ಚಿಕ್ಕಮಗಳೂರು

ಭವಾನಿ ಶಂಕರೇಶ್ವರ ಸ್ವಾಮಿ ರಥೋತ್ಸವ

Published On :

ನರಸಿಂಹರಾಜಪುರ: ತಾಲೂಕಿನ ಹೆಬ್ಬೆ ಅಭಯಾರಣ್ಯದಲ್ಲಿರುವ ಐತಿಹಾಸಿಕ ಭವಾನಿ ಶಂಕರೇಶ್ವರ ಸ್ವಾಮಿ ರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಪ್ರಯುಕ್ತ ಶನಿವಾರ ಬೆಳಗ್ಗೆ ಭವಾನಿ ಶಂಕರೇಶ್ವರ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಚೈತ್ರ ಬಹುಳ ದ್ವಾದಶಿಯ ಅಭಿಜಿನ್ ಮುಹೂರ್ತದಲ್ಲಿ ರಥೋತ್ಸವ ಪ್ರಾರಂಭವಾಯಿತು.
ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಕೂರಿಸಲಾಯಿತು. ಭಕ್ತರು ದವಸಧಾನ್ಯ, ಹೂಗಳನ್ನು ರಥಕ್ಕೆ ತೂರಿ ಜಯ ಘೋಷ ಹಾಕಿದ ನಂತರ ರಥೋತ್ಸವ ಪ್ರಾರಂಭವಾಯಿತು. ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ಪಾರ್ವತಿ,ಪರಮೇಶ್ವರ ಒಂದೇ ಲಿಂಗದಲ್ಲಿ: ಇತಿಹಾಸ ಪ್ರಸಿದ್ಧ ಹೆಬ್ಬೆ ಭವಾನಿ ಶಂಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಾರ್ವತಿ ಮತ್ತು ಪರಮೇಶ್ವರ ಒಂದೇ ಲಿಂಗದಲ್ಲಿ ಉದ್ಭವವಾಗಿರುವುದು ವಿಶೇಷವಾಗಿದೆ. ಭದ್ರಾ ತಟದಲ್ಲಿರುವ ಕಳಸ, ಖಾಂಡ್ಯ, ಕೂಡ್ಲಿ, ಹೆಬ್ಬೆ ಹಾಗೂ ಸೂಂಪುರದಲ್ಲಿ ಭವಾನಿ ಶಂಕರೇಶ್ವರ ದೇವಾಲಯಗಳಿದ್ದು, ಈ ಐದು ಪಂಚ ಲಿಂಗಗಳಲ್ಲಿ ಹೆಬ್ಬೆ ದೇವಸ್ಥಾನವೂ ಸೇರಿದೆ.
ಈ ಅಭಯಾರಣ್ಯದಲ್ಲಿ ಭದ್ರಾ  ಹೇರಂಭ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಊರಿಗೆ ಹೇರಂಭ ಎಂಬ ಹೆಸರು ಬಂದಿದ್ದು, ನಂತರ ಜನರ ಬಾಯಲ್ಲಿ ಇದು ಹೆಬ್ಬೆ ಎಂದು ನಾಮಕರಣವಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಮುಳುಗದ ದೇಗುಲ: ನೂರಾರು ವರ್ಷಗಳಿಂದಲೂ ರಥೋತ್ಸವ ನಡೆಯುತ್ತಿದ್ದು, ಈ ಭಾಗದ ಗ್ರಾಮಸ್ಥರು ಭಾಗವಹಿಸುತ್ತಿದ್ದರು. ಭದ್ರಾ ಆಣೆಕಟ್ಟು ಕಟ್ಟಿದ ನಂತರ ಇಲ್ಲಿನ ಗ್ರಾಮಗಳು ಭದ್ರಾ ಹಿನ್ನೀರಿನಿಂದ ಮುಳುಗಿ ಹೋಯಿತು.
 ಆದರೆ,ಪವಾಡ ಎಂಬಂತೆ ಹೆಬ್ಬೆಯ ಭವಾನಿ ಶಂಕರೇಶ್ವರ ಸ್ವಾಮಿ ದೇವಾಲಯವು ಮಾತ್ರ ಮುಳುಗಲಿಲ್ಲ. ಈಗ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಅರ್ಚಕರು ತೆಪ್ಪದ ಮೂಲಕ ಭದ್ರಾ ಹಿನ್ನೀರು ದಾಟಿ ಹೋಗುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.