ಮಾಂಸದ ತ್ಯಾಜ್ಯ ವಿಲೇವಾರಿಗೆ ಆಗ್ರಹ
ಕ.ಪ್ರ.ವಾರ್ತೆ, ಕಡೂರು, ಏ.27 ಪಟ್ಟಣದ ಕೋಟೆ ಹಳೇಸಂತೆ ಮೈದಾನದಲ್ಲಿರುವ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿರುವ ಕೋಳಿ, ಮೀನು ಹಾಗೂ ಮಾಂಸದ ತ್ಯಾಜ್ಯವನ್ನು ದೂರ ಪ್ರದೇಶಕ್ಕೆ ವಿಲೇವಾರಿ ಮಾಡದಿರುವುದರಿಂದ ಪಕ್ಕದಲ್ಲಿಯೇ ಇರುವ ಅಂಗನವಾಡಿ ಮಕ್ಕಳು, ಸರ್ಕಾರಿ ಶಾಲೆಯ ಮಕ್ಕಳು, ದೇವಾಲಯ ಮತ್ತು ಈ ಭಾಗದ ನಿವಾಸಿಗರಿಗೆ ಪ್ರತಿದಿನ ಹಿಂಸೆಯಾಗುತ್ತಿದೆ ಎಂದು ಸಮೀಪದ ನಿವಾಸಿಗಳು ದೂರಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದ ಕೋಟೆ ಹಳೇ ಸಂತೆ ಮೈದಾನದಲ್ಲಿರುವ ಮೀನು, ಮಾಂಸ ಮಾರಾಟದ ಅಂಗಡಿಗಳಿಂದ ಸ್ಥಳೀಯ ಪುರಸಭೆಗೆ ತಿಂಗಳಿಗೆ ಲಕ್ಷಾಂತರ ರೂ ಆದಾಯ ಬರುತ್ತಿದ್ದರೂ, ಪುರಸಭೆ ಮಾಂಸದ ತಾಜ್ಯ ವಿಲೇವಾರಿಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಶಾಲೆಗೆ ದುರ್ನತ: ಕೋಳಿಯ ಪುಕ್ಕ ಎಲ್ಲೆಂದರಲ್ಲಿ ಹಾರಿ ಅಂಗಡಿಗಳ ಪಕ್ಕದಲ್ಲೇ ಇರುವ ಸಣ್ಣಸಣ್ಣ ಮಕ್ಕಳು ಕಲಿಯುವ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದುರ್ನಾತ ಬೀರುತ್ತದೆ. ಸಮೀಪದಲ್ಲಿಯೇ ದೇವಾಲಯವಿದೆ. ರೇಲ್ವೆಗೇಟ್ ಸಮೀಪದಲ್ಲಿರುವ ನೂರಾರು ಅಂಗಡಿಯ ವರ್ತಕರು, ಮಂಡಿಗಳು, ಬ್ಯಾಂಕುಗಳ ತನಕ ದುರ್ವಾಸನೆ ಹರಡುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.
ಹತ್ತಿರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಜರುಗುವ ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಎಲೆಗಳನ್ನು ದೂರಕ್ಕೆ ಸಾಗಿಸದೇ ಇರುವುದರಿಂದಲೂ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಹಲವಾರು ಭಾರಿ ಹೇಳಿದರೂ ಸಹ ಯಾವ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಮುಂದುವರಿದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ವರ್ತಕರು ಹಾಗು ನಾಗರಿಕರು ಎಚ್ಚರಿಸಿದ್ದಾರೆ.
ಈಗಾಗಲೇ ಹಳೇಸಂತೆ ಮಳಿಗೆ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಮುಚ್ಚಿ ಹೋಗಿರುವ ಚರಂಡಿಯನ್ನು ಸ್ವಚ್ಛಮಾಡಿ ನೀರು ಹರಿದುಹೋಗುವಂತೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಮಳೆ ನೀರು ಅಂಗಡಿಗಳಿಗೆ ಒಳನುಗ್ಗಿ ಆದ್ದರಿಂದ ಕೂಡಲೇ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಈ ಕೋಳಿ ತ್ಯಾಜ್ಯ ವಿಲೇವಾರಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

