ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ
ಬಾಳೆಹೊನ್ನೂರು: ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಚಿಣ್ಣರ ಅಂಗಳ ಬೇಸಿಗೆ ಶಿಬಿರವು ಸಹಕಾರಿ ಆಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.
ಇಲ್ಲಿನ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಅಂಗಳ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಬಿಟ್ಟ ಮಕ್ಕಳು ಹಾಗೂ ಬೇರೆ ಊರಿನಿಂದ ಬಂದ ಮಕ್ಕಳನ್ನು ಈ ಕೇಂದ್ರಕ್ಕೆ ಸೇರಿಸಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುವುದು. ಇದು ವಸತಿ ರಹಿತ ಕಾರ್ಯಕ್ರಮ. ಶಿಕ್ಷಕರು ಸ್ವಯಂ ಸೇವಕರು ಹಾಗೂ ಪೋಷಕರು ಮನೆ ಮನೆಗೆ ತೆರಳಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಶ್ರಮಿಸುತ್ತಿದ್ದಾರೆ ಎಂದರು.
ಮುಖ್ಯ ಶಿಕ್ಷಕ ಕಳಸಪ್ಪ, ಸಿಆರ್ಪಿ ಸೋಮಶೇಖರ್, ಇಸಿಓ ಬಸವರಾಜು, ಬಿಆರ್ಪಿ ತಿಪ್ಪೇಸ್ವಾಮಿ, ಶಿಕ್ಷಕಿಯ ವಾಣಿ, ಸ್ವಯಂ ಸೇವಕಿ ಡಿ.ರೇಣುಕಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.
ಸುಗ್ಗಿಹಬ್ಬ: ಕೆಂಡೋತ್ಸವ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕೊಳಲೆ ಗ್ರಾಮದ ನಿಡುಗೋಡಿನ ಮಾಳೂರಮ್ಮ ದೇವಿಯ ಸುಗ್ಗಿಹಬ್ಬ ಹಾಗೂ ಕೆಂಡೋತ್ಸವ ಕಾರ್ಯಕ್ರಮ ನಡೆಯಿತು. ಸುಗ್ಗಿ ಹಬ್ಬದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂಡಿಹೊಳೆ, ಮೇಗರಮಕ್ಕಿ, ಆಡುವಳ್ಳಿ, ಗಡಿಗೇಶ್ವರ, ಇಡ್ಕುಣಿ, ಕಿಚ್ಚಬ್ಬಿ ಸೇರಿದಂತೆ ಸುತ್ತಮುತ್ತಲಿನಿಂದ ಭಕ್ತರು ಹಣ್ಣು -ಕಾಯಿ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು. ಆಡುವಳ್ಳಿ ಗ್ರಾ,ಪಂ ಅಧ್ಯಕ್ಷ ಎನ್.ಎ. ಚನ್ನಪ್ಪಗೌಡ, ಗುರುಮೂರ್ತಿ, ನಿಡುಗೋಡು ಚಂದ್ರೇಗೌಡ, ಕತಗಾರು ಗಂಗಪ್ಪಗೌಡ, ಕಿಚ್ಚಬ್ಬಿ ಮಂಜಪ್ಪಗೌಡ, ನಿಡುಗೋಡು ಗಣೇಶ್ ಸುಗ್ಗಿಹಬ್ಬದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಶಿಕುಮಾರ್ಗೆ ಚಿನ್ನ
ತರೀಕೆರೆ: ಬೆಂಗಳೂರು, ಮಾರತಹಳ್ಳಿ ಆರ್ಮಿ ಸರ್ವೀಸ್ ಸೆಂಟರ್ನಲ್ಲಿ ಭಾರತೀಯ ಸೇನಾಪಡೆಯಲ್ಲಿ ಹವಾಲ್ದಾರ್ ಕೆ.ಹೊಸೂರಿನ ಶಶಿಕುಮಾರ್, ನವದೆಹಲಿ ಆರ್ಮಿ ಸ್ಪೋರ್ಟ್ಸ್ ಸೆಂಟ್ರಲ್ ಬೋರ್ಡ್ನಿಂದ ನವದೆಹಲಿಯಲ್ಲಿ ನಡೆದ ಇಂಟರ್ ಕಮ್ಯಾಂಡ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ. ಇಂಡಿಯನ್ ಟೀಂ ಕೋಚರ್ ಸುಬೇದಾರ್ ಸಿ.ಆರ್. ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಆಶಯ ಹೊಂದಿದ್ದಾರೆ. ಡಿ.ತಿಮ್ಮಪ್ಪ ಮತ್ತು ಲಕ್ಷ್ಮಿದೇವಿ ಅವರ ಪುತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

