ಚಿಕ್ಕಮಗಳೂರು

ಅಡಕೆ, ಕಾಳುಮೆಣಸು ಬೆಳೆಗೆ ಕೊಳೆ, ಚಿಬ್ಬು ರೋಗ ಸಾಧ್ಯತೆ

Published On :

ಮೂಡಿಗೆರೆ: ತಾಲೂಕಿನಾದ್ಯಂತ ಅತಿಯಾಗಿ ಮಳೆ ಬೀಳುತ್ತಿರುವುದರಿಂದ ಹಾಗೂ ವಾತಾವರಣದ ಅಸಮತೋಲನದಿಂದ ಅಡಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗ ಹಾಗೂ ಚಿಬ್ಬು ರೋಗ  ಬರುವ ಸಂಭವ ಹೆಚ್ಚಾಗಿದೆ.
ತಾಲೂಕಿನ ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಕೆಲವೊಂದು ಸಲಹೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ದಿವ್ಯ ತಿಳಿಸಿದ್ದಾರೆ.
ಸಾಮಾನ್ಯವಾಗಿ ಕಾಳುಮೆಣಸಿಗೆ ಮುಂಗಾರಿಗೆ ಮೊದಲು ಒಂದು ಬಾರಿ, ಮುಂಗಾರಿನ ಸಮಯದಲ್ಲಿ ಮತ್ತು ಮುಂಗಾರಿನ ನಂತರ ಒಂದು ಬಾರಿ ಶೇ.1ರ ಬೋರ್ಡೋ ದ್ರಾವಣ ಅಥವಾ 2 ಗ್ರಾಂ ಹೆಕ್ಸಾಕೊನ ಜೋಲ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಬಳ್ಳಿಗಳಿಗೆ ಸಿಂಪಡಿಸಬೇಕು. ಇದರಿಂದ ಕಾಯಿ ಗೊಂಚಲು ಕೊಳೆಯುವಿಕೆ ತಡೆಯಬಹುದು.
 ಈ ರೋಗಗಳನ್ನು ತಡೆಗಟ್ಟಲು ಮಳೆ ಇಲ್ಲದ ದಿನ ನೋಡಿ ಶೇ.1ರ ಬೋರ್‌ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೇಡ್ ಅಥವಾ 2 ಗ್ರಾಂ ಮೆಟಲಾಕ್ಸಿಲಲ್ಮತ್ತು ಮ್ಯಾಂಕೋಜೆಬ್ 72 ಡಬ್ಲೂ ಪಿ ಅಥವಾ 2 ಗ್ರಾಂ ಪೊಟ್ಯಾಷಿಯಂ ಪಾಸ್‌ಪೋನೆಟ್ ಒಂದು ಲೀಟರ್‌ನಲ್ಲಿ ಕರಗಿಸಿ ಈ ಹಂತದಲ್ಲಿ  ಒಂದು ಸಿಂಪಡಣೆ ಹಾಗೂ 30 ರಿಂದ 45 ದಿನಗಳ ಅಂತರದಲ್ಲಿ ಇನ್ನೊಂದು ಸಿಂಪಡಣೆ ಕೈಗೊಳ್ಳುವುದರಿಂದ ರೋಗ ಹತೋಟಿಗೆ ತರಬಹುದು.
ಹೆಚ್ಚಿನ ತಾಂತ್ರಿಕ ಮಾಹಿತಿ ಅವಶ್ಯಕವಿದ್ದಲ್ಲಿ ತಾಲೂಕಿನ ತೋಟಗಾರಿಕೆ ಇಲಾಖೆ (08263-220790)  ಸಂಪರ್ಕಿಸಲು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.