'ಬಾಳೆ ಕೃಷಿಕ ಭದ್ರೇಗೌಡ ಸಾಧನೆ ಮರೆತ ಸರ್ಕಾರ'
ಕ.ಪ್ರ.ವಾರ್ತೆ, ಮೂಡಿಗೆರೆ, ಫೆ. 5
ಕಳೆದ 65 ವರ್ಷಗಳಿಂದ ಬಾಳೆ ಕೃಷಿ ಮಾಡುವ ಮೂಲಕ ಯಶಸ್ಸು ಸಾಧಿಸಿದ ದಂಪತಿಗಳನ್ನು ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮರೆತಿರುವುದು ಶೋಚನಿಯ ಸಂಗತಿ ಎಂದು ತಾಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಎಸ್.ಎನ್. ಮಂಜುನಾಥ್ ಅಭಿಪ್ರಾಯಿಸಿದರು.
ತಾಲೂಕಿನ ಹೊರಟ್ಟಿಯಲ್ಲಿ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಬಾಳೆ ಕೃಷಿ ಭದ್ರೇಗೌಡ ಮತ್ತು ಅವರ ಧರ್ಮಪತ್ನಿ ಸೀತಮ್ಮ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ಬೆಳೆಗಾರರು ಮತ್ತು ರೈತರಿಗೆ ಕೃಷಿ ಪ್ರಶಸ್ತಿ ನೀಡಿರುವ ಸರ್ಕಾರ ಬಾಳೆ ಬೆಳೆ ಸಾಧಕ ಭದ್ರೇಗೌಡ ಅವರನ್ನು ಮರೆತಿರುವುದು ಬೇಸರದ ಸಂಗತಿ. ಭದ್ರೇಗೌಡರು ತಮ್ಮ 88ನೇ ವಯಸ್ಸಿನಲ್ಲಿಯೂ ಹರೆಯದ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದರು.
ಸನ್ಮಾನ ಸ್ವಿಕರಿಸಿದ ಭದ್ರೇಗೌಡರು ಮಾತನಾಡಿ, ತಾವು ಓದಿರುವುದು ಕೇವಲ 3ನೇ ತರಗತಿ. ತಮ್ಮ ತಂದೆ ಬೊಮ್ಮೇಗೌಡ ಮತ್ತು ತಾಯಿ ಚೋಟಮ್ಮ ಕೃಷಿಕರು. ಅವರು ಹಾಕಿಕೊಟ್ಟ ಹಾದಿಯಲ್ಲೆ ಮುಂದುವರಿದಿದ್ದೇನೆ. 1 ಎಕರೆ ಭೂಮಿಯಲ್ಲಿ 100 ಕೆಜಿ ಏಲಕ್ಕಿ, 5 ಎಕರೆಯಲ್ಲಿ 500 ಕೆಜಿ ಏಲಕ್ಕಿಯನ್ನು ಸಾವಯವ ಕೃಷಿಯ ಮೂಲಕ ಬೆಳೆಯುತ್ತಿದ್ದು, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಮಕ್ಕಳೂ ಕೃಷಿಯನ್ನೇ ನಂಬಿ ಮುನ್ನಡೆದಿದ್ದಾರೆ ಎಂದರು.
ಪತ್ರಕರ್ತ ಹೊರಟ್ಟಿ ಮುಕ್ತಿಯಾರ್ ಮಾತನಾಡಿದರು. ಹಿರಿಯ ಪತ್ರಕರ್ತ ಹೊರಟ್ಟಿ ರಘುನಾಥ್, ಶಾರದ ಶೇಖರ್, ಎಸ್.ಎಂ. ಸೋಮಶೇಖರ್, ಎಸ್.ಎಲ್. ರಾಘವೇಂದ್ರ, ವರ್ತಕ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

