'ಕಾಲದಂತೆ ವ್ಯವಸ್ಥೆಯೂ ಬದಲಾಗಬೇಕಿದೆ'
ಕ.ಪ್ರ.ವಾರ್ತೆ, ಕಡೂರು, ಫೆ.6
ಸಂಪ್ರದಾಯ, ಕಾಲ ಬದಲಾದಂತೆ ಸಮುದಾಯಗಳೂ ಕೂಡ ಕಾಲ ಮತ್ತು ವ್ಯವಸ್ಥೆಗೆ ತಕ್ಕಂತೆ ಹೊಂದಿಕೊಂಡು ಬದುಕುವುದನ್ನು ಎಲ್ಲ ಸಮಾಜಗಳೂ ಕೂಡ ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು.
ಪಟ್ಟಣದ ವೀರಭದ್ರಸ್ವಾಮಿ ಸಮುದಾಯಭವನದಲ್ಲಿ ತಾಲೂಕು ಯುವ ಕುರುಬರ ವೇದಿಕೆಯಿಂದ ಏರ್ಪಡಿಸಿದ್ದ ಡಾ. ಕೆ.ಎಂ. ಮಲ್ಲಿಕಾರ್ಜುನ್ ಅವರ “OÚßÁÚß¶ÁÚß’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಾಲ ಬದಲಾದಂತೆ ವ್ಯವಸ್ಥೆಗಳೂ ಕೂಡ ಬದಲಾಗಬೇಕಾದ ಅಗತ್ಯತೆ ಎಲ್ಲ ಸಮುದಾಯಗಳಲ್ಲೂ ಇದೆ. ಹಿಂದಿನ ಕಾಲದಿಂದಲೂ ವ್ಯವಸಾಯ, ಕುರಿ ಕಾಯುವುದು ಕುರುಬ ಸಮುದಾಯದ ಕುಲ ಕಸುಬಾಗಿದ್ದರೂ ಕಾಲ ಕ್ರಮೇಣ ಇಂದು ಬೇರೆ ಬೇರೆ ಉದ್ಯೋಗ ಮಾಡುವ ಮೂಲಕ ಕೃಷಿ, ದನಕರು ಮತ್ತು ಕುರಿ ಸಾಕುವ ವೃತ್ತಿಗಳು ಕಡಿಮೆಯಾಗಿದೆ ಎಂದರು.
ಈ ಸಮಾಜವು ಎಲ್ಲ ಸಮುದಾಯಗಳೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವ ಮತ್ತು ನಂಬಿಕೆಗೆ ಅರ್ಹವಾಗಿದೆ ಎಂಬುದಕ್ಕೆ ರಾಣಿ ಚನ್ನಮ್ಮನಿಗೆ ನಂಬಿಕಸ್ಥನಾಗಿದ್ದ ಸಂಗೊಳ್ಳಿ ರಾಯಣ್ಣ ಸಾಕ್ಷಿ. ಕುರುಬರ ಜೀವನ ಪದ್ಧತಿ, ರೀತಿ ನೀತಿಗಳನ್ನು ಲೇಖಕ ಮಲ್ಲಿಕಾರ್ಜುನ್ ತಮ್ಮ ಕೃತಿಯಲ್ಲಿ ಉತ್ತಮವಾಗಿ ವರ್ಣಿಸಿದ್ದಾರೆ. ಅವರನ್ನು ಕುರುಬ ಸಮಾಜದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಜಿ.ಪಂ. ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಕುರುಬ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ. 15 ಹಾಗೂ 16ನೇ ಶತಮಾನದಲ್ಲಿ ಸುಮಾರು 325 ವರ್ಷ ಕಾಲ ದಕ್ಷಿಣ ಭಾರತವನ್ನು ಆಳಿದಂತಹವರು ಕುರುಬ ಸಮುದಾಯದವರು ಎಂಬುದು ಹೆಮ್ಮೆಯ ವಿಚಾರ ಎಂದರು.
ಲೇಖಕ ಡಾ. ಕೆ.ಎಂ. ಮಲ್ಲಿಕಾರ್ಜುನ್ ಅವರನ್ನು ಕುರುಬರ ವೇದಿಕೆ ಹಾಗೂ ಕುರುಬ ಸಮಾಜದ ಪರವಾಗಿ ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶರತ್ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನಕ ನೌಕರ ಸಂಘದ ಅಧ್ಯಕ್ಷ ರೇವಣ್ಣ, ಕವಿರತ್ನ ಕಾಳಿದಾಸ ಯುವಕ ಸಂಘದ ಅಧ್ಯಕ್ಷ ನಲ್ಲೂರಿ ಮಂಜುನಾಥ್, ಕನಕ ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ವೇದಿಕೆಯ ಪದಾಧಿಕಾರಿಗಳಾದ ಆಡಿಟರ್ ಪ್ರಸಾದ್, ವಕೀಲ ಹರೀಶ್, ರವಿ, ಪುರಸಭಾ ಸದಸ್ಯರಾದ ಲೋಕೇಶ್,ಸೋಮಶೇಖರ್, ಚಂದ್ರಶೇಖರ್, ಹರೀಶ್, ಓಂಕಾರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

