'ವಿವಿಧ ವರದಿಯಿಂದ ಪರಿಸರದ ಪಾಠ ಅಗತ್ಯವಿಲ್ಲ'
ಶೃಂಗೇರಿ: ಮಲೆನಾಡಿನ ಜನ ತಲತಲಾಂತರದಿಂದ ಪ್ರಕೃತಿಯ ನಡುವೆ ಬದುಕುತ್ತಾ ಪರಿಸರ ಸಂರಕ್ಷಿಸಿಕೊಳ್ಳುತ್ತಲೇ ಬಂದಿದ್ದು, ಡಾ. ಕಸ್ತೂರಿ ರಂಗನ್, ಮಾಧವ ಗಾಡ್ಗಿಳ್ ವರದಿಯಿಂದ ಪರಿಸರದ ಪಾಠ ಕಲಿಯಬೇಕಾಗಿಲ್ಲ. ಈ ವರದಿಗಳು ಜನರನ್ನು ಮನುಷ್ಯರನ್ನಾಗಿ ಪರಿಗಣಿಸದೇ ಅವರ ಬದುಕಿಗೆ ಕೊಡಲಿಯೇಟು ಹಾಕುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಆರೋಪಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತಪರ ಸಂಘಟನೆಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.
ಅಪಾರ ಹಣ: ಯೋರೋಪಿನ ಕೆಲ ದೇಶಗಳಲ್ಲಿ ಜಾಗತೀಕರಣದಿಂದ ಅರಣ್ಯ ನಾಶವಾಗಿ ಕಾಡು ಬೆಳೆಸಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಪ್ರಕೃತಿ ವಿಕೋಪ ತಡೆಗಟ್ಟಿ, ತಮ್ಮ ನೆಲೆ ಉಳಿಸಿಕೊಳ್ಳಲು ಭಾರತದಂತಹ ದೇಶಗಳಲ್ಲಿ ಕಾಡು ಬೆಳೆಸಲು ಅಪಾರ ಹಣ ನೀಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮ ಸರ್ಕಾರಗಳು ಪಶ್ಚಿಮ ಘಟ್ಟದಂತಹ ಪ್ರದೇಶಗಳನ್ನು ಬಲಿಕೊಡಲು ಹೊರಟಿದೆ ಎಂದರು.
ರೈತ ಮುಖಂಡ ನಂಜುಂಡಸ್ವಾಮಿಯವರು 30 ವರ್ಷದ ಹಿಂದೆಯೇ ಜಾಗತೀಕರಣದ ವಿರುದ್ಧ ದನಿ ಎತ್ತಿದ್ದರು. ಆದರೆ ಯಾರೂ ಇದಕ್ಕೆ ದನಿಗೂಡಿಸಲಿಲ್ಲ. ಪರಿಣಾಮ ಇಂದು ಜಾಗತೀಕರಣವೆಂಬುದು ವಿಷವರ್ತುಲವಾಗಿ ಪರಿಣಮಿಸಿದೆ. ಈ ವರದಿಯಂತೆ ಸಾಕು ಪ್ರಾಣಿಗಳ, ಕೃಷಿ ಚಟುವಟಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದರು.
ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ದೇವರಾಜ್ ಮಾತನಾಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಟಿ.ಕೆ. ಗೋಪಾಲನಾಯ್ಕ್, ಕಾನೋಳ್ಳಿ ಚಂದ್ರಶೇಖರ್, ಬಂಡ್ಲಾಪುರ ಶ್ರೀಧರ ರಾವ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

