ಯುಪಿಎ ವೈಫಲ್ಯ ತಿಳಿಸಲು 'ಜನಜಾಗರಣ ಅಭಿಯಾನ'
ಬೀರೂರು: ಯುಪಿಎ ಸರ್ಕಾರದ ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ಹಮ್ಮಿಕೊಂಡಿರುವ ಜನಜಾಗರಣ ಅಭಿಯಾನಕ್ಕೆ ಕಡೂರು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಅವರು ಭಾನುವಾರ ಇಲ್ಲಿನ ಮಾರ್ಗದ ಕ್ಯಾಂಪ್ ರಾಮಮಂದಿರ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ, ಈ ದೇಶಕ್ಕೆ ಬೇಕಾಗಿದೆ. ಕಾಂಗ್ರೆಸ್ ಸರ್ಕಾರಗಳ ನಿರಂತರ ಭ್ರಷ್ಟಾಚಾರ, ಯೋಜನೆ ವೈಫಲ್ಯಗಳ ಬಗ್ಗ್ಗೆ ಮತದಾರರಿಗೆ ಮಾಹಿತಿ ನೀಡಿ ದೇಶದ ಆಂತರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಬಾಹ್ಯ ಶಕ್ತಿಗಳಿಗೆ ದಿಟ್ಟ ಉತ್ತರ ನೀಡಲು ಬಿಜೆಪಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೀರೂರು ನಗರ ಘಟಕ ಅಧ್ಯಕ್ಷ ಬಸವರಾಜ್, ಜನಸಾಮಾನ್ಯರ ಭಾವನೆಗೆ ಸಾಕ್ಷಿಯಾದ ಸಮರ್ಥ ಅಡಳಿತಗಾರ ಭಾರತದ ಉಜ್ವಲ ಭವಿಷ್ಯದ ಕನಸುಗಾರ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಬೇಕೆಂಬುದು ಈ ದೇಶದ ಬಹುಪಾಲು ನಾಗರಿಕರ ಅಭಿಲಾಷೆ ಎಂದರು.
ನಗರ ಘಟಕ ಉಪಾಧ್ಯಕ್ಷ ಮೋಹನ್ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಮಧು, ಪುರಸಭಾ ಸದಸ್ಯರಾದ ಬಿ.ನಾಗರಾಜ್, ಅರ್ಜುನ್, ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್, ಬೀರೂರು ಯುವ ಮೋರ್ಚಾ ಅಧ್ಯಕ್ಷ ಕೊಬ್ರಿ ಮಂಜುನಾಥ್, ಲೋಕೇಶ್, ನಾಗರಾಜ್ ಪವಾರ್, ರಮೇಶ್, ಪಾಪಣ್ಣ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

