ಚಿಕ್ಕಮಗಳೂರು

ಇಂದಿನಿಂದ ಕೊಪ್ಪ ತಾ. ಸಾಹಿತ್ಯ ಸಮ್ಮೇಳನ

Published On :

ಕೊಪ್ಪ: ತಾಲೂಕಿನ ಪುರಾಣ ಪ್ರಸಿದ್ಧ ಬಸರೀಕಟ್ಟೆ ಫೆ.24 ರಿಂದ ನಡೆಯುವ 7 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಂಪೂರ್ಣ ಸಜ್ಜಾಗಿದೆ. ಕಳೆದ 50 ವರ್ಷದ ಹಿಂದೆ ಬದ್ರಿಶ್ರೀ ಕಟ್ಟೆ ಎಂದು ಕರೆಯಲ್ಪಡುತಿದ್ದ ಊರು ಬಸ್ತಿಕಟ್ಟೆ, ಬಸ್ರೀಕಟ್ಟೆ, ಪ್ರಸಕ್ತ ಬಸರೀಕಟ್ಟೆ ಎಂದು ಕರೆಯಲ್ಪಡುತ್ತಿದೆ.
ಬದರೀಕಾಶ್ರಮದ ಜನಾರ್ದನಸ್ವಾಮಿ ನೆಲೆಯನ್ನು ಬದ್ರಿಶ್ರೀ ಕಟ್ಟೆ ಎಂದು ಕರೆಯಲ್ಪಡುತಿದ್ದು, ಕಾಲಕ್ರಮೇಣ ಬಸರೀಕಟ್ಟೆಯಾಗಿ ಪರಿವರ್ತನೆಯಾಗಿದೆ ಎನ್ನುತ್ತಾರೆ ಊರಿನ ಮೂಲ ನಿವಾಸಿ ಪಟೇಲ್ ಕುಟುಂಬದ ಮುರಳಿ.
ಮಲೆನಾಡಿಗೆ ಮಳೆ ಸುರಿಸುವ ಅತೀ ಎತ್ತರದ ಮೇರುತಿ ಪರ್ವತದ ತಪ್ಪಲಿನಲ್ಲಿ ಹೊರನಾಡು, ಶೃಂಗೇರಿ ಯಾತ್ರಾ ಕ್ಷೇತ್ರದ ಕೇಂದ್ರಬಿಂದುವಾಗಿದೆ.
ಸಾರಿಗೆ ಸಹಕಾರ: ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗಾಗಿ ಕೊಪ್ಪ ತಾಲೂಕಿನ ವಿವಿಧ ಪಟ್ಟಣಗಳಿಂದ ವಿಶೇಷ ಬಸ್ಸು ಸೌಲಭ್ಯ ಕಲ್ಪಿಸಲು ಸಹಕಾರ ಸಾರಿಗೆ ತಯಾರಿ ನಡೆಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಇ.ಎನ್. ಧರ್ಮಪ್ಪ ತಿಳಿಸಿದ್ದಾರೆ.
ಬಸರೀಕಟ್ಟೆ ಸದ್ಗುರು ಪ್ರೌಢಶಾಲೆಯ ಬಯಲಿನಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಪಟ್ಟಣ ತಳಿರುತೋರಣ ಸ್ವಾಗತ ಕಮಾನಗಳಿಂದ ವಿಜೃಂಭಿಸುತ್ತಿದೆ.
ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿ ಪದಾಧಿಕಾರಿ ಜಿ.ಎಸ್. ಮಹಾಬಲ, ಗುಡ್ಡೇತೋಟ ನಟರಾಜ್, ತಲ್ವಾನೆ ಪ್ರಕಾಶ್, ಬಸ್ರೀಕಟ್ಟೆ ಗೋಪಾಲ, ಕಿರಣ್, ಧರ್ಮರಾಜ್, ರತ್ನಾಕರ, ಸುರೇಶ್, ಶಂ.ನ.ಶೇಷಗಿರಿ ಮೊದಲಾದವರು ಶ್ರಮಿಸುತಿದ್ದಾರೆ.
2 ದಿನದ ಸಮ್ಮೇಳನದಲ್ಲಿ ಐದು ಸಾವಿರ ಸಾಹಿತ್ಯಾಸಕ್ತರನ್ನು ನಿರೀಕ್ಷಿಸಲಾಗಿದ್ದು, ಎಲ್ಲರಿಗೂ ಊಟೋಪಚಾರ, ವಸತಿ ಕಲ್ಪಿಸಲು ಸಮಿತಿ ಶ್ರಮಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.