ಸೋಮೇಶ್ ತಂಡ ಜಯಭೇರಿ
ಕಡೂರು: ಬಹಳಷ್ಟು ಕುತೂಹಲ ಕೆರಳಿಸಿದ್ದ ಕಡೂರು ಪಟ್ಟಣದ ಟೌನ್ ಕೋ. ಆಪರೇಟಿವ್ ಸೊಸೈಟಿ ಚುನಾವಣೆಯುಲ್ಲಿ ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಪ್ರಮುಖರು ಪರಾಭವಗೊಂಡು ಕೆ.ಬಿ.ಸೋಮೇಶ್ ನೇತೃತ್ವದ ತಂಡವು ಜಯಭೇರಿ ಭಾರಿಸುವ ಮೂಲಕ ಮತದಾರರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. 11 ಸ್ಥಾನಗಳಿಗೆ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ 24 ಅಭ್ಯರ್ಥಿಗಳು ಕಣದಲ್ಲಿರುವ ಮೂಲಕ ಡಿ. ಲಕ್ಷ್ಮಣ್ ತಂಡವು ಪರಾಭವಗೊಳ್ಳುವ ಮೂಲಕ ಹೊಸಬರು ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗದ ಮೀಸಲು ಕ್ಷೇತ್ರದಿಂದ ಕೆ.ಬಿ. ಸೋಮೇಶ್ ಆಯ್ಕೆಯಾಗಿ ತಂಡದ ಕೆ.ಜಿ.ಶ್ರೀನಿವಾಸಮೂರ್ತಿ ಕಾರ್ಖಾನೆ(ಸಾಮಾನ್ಯ), ಹೊನ್ನಪ್ಪನವರ ಕೆ.ಹೆಚ್.ರವಿ (ಸಾಮಾನ್ಯ),ಕೃಷ್ಣಮೂರ್ತಿಜೋಷಿ (ಸಾಮಾನ್ಯ),ಎನ್.ಎಂ.ರಾಮಪ್ರಸಾದ್ ್ಸಾಮಾನ್ಯ), ಟಿ.ಆರ್.ಸುರೇಶ್(ಸಾಮಾನ್ಯ),ಕೆ.ಮಾಧವ (ಸಾಮಾನ್ಯ), ವಿ.ಎಂ.ಪ್ರಸಾದ್(ಸಾಮಾನ್ಯ), ಕೆ.ಕೆ.ಮಂಜು(ಪರಿಶಿಷ್ಟ ಜಾತಿ ಪಂಗಡ), ಬಿ.ಎಸ್.ಅನಿತಾ(ಮಹಿಳೆ ಮೀಸಲು) ಕಲ್ಪನಲವ (ಮಹಿಳೆ ಮೀಸಲು)ಗೆಲುವು ಸಾಧಿಸಿದ್ದಾರೆ. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್ ಅಭಿನಂದನೆ ಸಲ್ಲಿಸಿದ್ದಾರೆ.
ವಾರ್ಷಿಕೋತ್ಸವ
ಚಿಕ್ಕಮಗಳೂರು: ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್ ಸಂಸ್ಥೆಯ 7ನೇ ವಾರ್ಷಿಕೋತ್ಸವವನ್ನು ನಗರದ ಸಂತ ಜೊಸೆಫರ ಪ್ರಧಾನ ದೇವಾಲಯದಲ್ಲಿ ಫೆ. 27 ರಂದು ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಸಂಜೆ 4 ಗಂಟೆಗೆ ಕೊಂಕಣಿ ಭಾಷೆಯಲ್ಲಿ ವಿಶೇಷ ಬಲಿಪೂಜೆ, ಧರ್ಮಗುರುಗಳಿಂದ ಜರುಗಲಿದೆ. ಸಂಜೆ 6 ಗಂಟೆಗೆ ಮಂಗಳೂರಿನ ಖ್ಯಾತ ನೆಲ್ಲೂ ಪೆರ್ಮುನ್ನೂರ್ ಮತ್ತು ಸಂಗಡಿಗರಿಂದ ಹಾಸ್ಯಭರಿತ ಕೊಂಕಣಿ ನಾಟಕ ಪ್ರದರ್ಶನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್ ಅಧ್ಯಕ್ಷ ಪ್ರಮೋದ್ ಪಿಂಟೋ ತಿಳಿಸಿದ್ದಾರೆ.
ಕಾಮಗಾರಿಗೆ ಚಾಲನೆ
ತರೀಕೆರೆ: ಸಮೀಪದ ಹರುವನಹಳ್ಳಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರು. 5 ಕೋಟಿ 18 ಲಕ್ಷ ಗಲ್ಲಿ ಹರುವನಹಳ್ಳಿಯಿಂದ ಬರ್ಗೇನಹಳ್ಳಿ, ವೆಂಕಟಾಪುರ, ವಡ್ಡರದಿಬ್ಬ, ಬಸವನಹಳ್ಳಿ, ರಂಗೇನಹಳ್ಳಿ ರಸ್ತೆ ವರೆಗೆ 7 ಕಿ.ಮಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ಏರ್ಪಡಿಸಲಾಗಿತ್ತು. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಜಿ.ಎಚ್. ಶ್ರೀನಿವಾಸ್, ಜಿಪಂ ಸದಸ್ಯ ಕೆ.ಪಿ. ಕುಮಾರ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ದೋರನಾಳ್ ಪರಮೇಶ್, ರಂಗಪ್ಪ, ಮಾಜಿ ಪುರಸಭಾಧ್ಯಕ್ಷ ಬಸವರಾಜ್, ಗ್ರಾಮಸ್ಥರು ಸೇರಿದಂತೆ ಹಲವರು ಇದ್ದರು.
ಡಿ ಗ್ರೂಪ್ ನೌಕರರಿಗೆ ನಿವೇಶನ ಹಕ್ಕುಪತ್ರ ವಿತರಣೆ
ಕ.ಪ್ರ.ವಾರ್ತೆ, ಕಡೂರು, ಫೆ.25 ತಾಲೂಕಿನ ಬೀರೂರು ಕಾವಲಿನಲ್ಲಿರುವ ಸ.ನಂ. 4ರಲ್ಲಿರುವ 10ಎಕರೆ ಜಮೀನಿನಲ್ಲಿ ಕಡೂರು ತಾಲೂಕಿನ 203 ಡಿ ಗ್ರೂಪ್ ನೌಕರರಿಗೆ ನಿವೇಶನ ಹಕ್ಕುಪತ್ರ ವಿತರಣೆ ನಡೆಯಿತು.
ತಾಲೂಕು ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಿ ಗ್ರೂಪ್ ನೌಕರರಿಗೆ ಹಕ್ಕು ಪತ್ರ ವಿತರಿಸಿದ ತಹಸೀಲ್ದಾರ್ ತಿಮ್ಮಭೋವಿ ಮಾತನಾಡಿ, ತಾಲೂಕಿನ ಡಿ. ಗ್ರೂಪ್ ಸರ್ಕಾರಿ ನೌಕರರ ಸಂಘಕ್ಕೆ ಜಿಲ್ಲಾಧಿಕಾರಿ ಆದೇಶದಂತೆ ಬೀರೂರು ಕಾವಲಿನಲ್ಲಿ ನಿವೇಶನ ನೀಡಲಾಗುತ್ತಿದೆ. ಪ್ರತಿ ನಿವೇಶನಕ್ಕೆ ರು. 12,000 ಶುಲ್ಕ ಪಡೆಯಲಾಗಿದೆ ಎಂದರು.
2ನೇಹಂತದ ನಿವೇಶನ: ಡಿ. ಗ್ರೂಪ್ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಕೆ. ಮಂಜಪ್ಪ ಮಾತನಾಡಿ, ಸಂಘ ಡಿ. ಗ್ರೂಪ್ ನೌಕರರಿಗೆ ನಿವೇಶನ ಕೊಡಿಸಲು ನಡೆಸಿದ ಹೋರಾಟಕ್ಕೆ ಫಲ ದೊರೆಯುವ ಮೂಲಕ ಇಂದು ಜಯ ಸಿಕ್ಕಿದೆ.
ಉಳಿದಿರುವ 47 ಜನರಿಗೆ ಶೀಘ್ರದಲ್ಲಿ 2 ನೇ ಹಂತದಲ್ಲಿ ನಿವೇಶನ ನೀಡಲಾಗುವುದು ಎಂದರು.
ಉಪ ತಹಸೀಲ್ದಾರ್ ತಿಪ್ಪೇಸ್ವಾಮಿ, ಗುರುರಾಜ್ ಮತ್ತು ತಿಮ್ಮಪ್ಪ, ಶ್ರೀನಿವಾಸ್, ಡಿ. ಗ್ರೂಪ್ ನೌಕರರ ಸಂಘದ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.
'ಹಲ್ಲಿನ ಆರೋಗ್ಯದ ಕಡೆ ಗಮನ ಹರಿಸಿ'
ಕ.ಪ್ರ.ವಾರ್ತೆ, ತರೀಕೆರೆ, ಫೆ.25 ಹಲ್ಲಿನ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಡಾ. ಪ್ರಶಾಂತ ಕುಲಕರ್ಣಿ ತಿಳಿಸಿದ್ದಾರೆ.
ಅವರು, ಪುರಸಭೆ, ಜನಚಿಂತನ ಸಂಸ್ಥೆ, ಶರಾವತಿ ದಂತ ಮಹಾವಿದ್ಯಾಲಯ ಶಿವಮೊಗ್ಗ ವತಿಯಿಂದ ಪಟ್ಟಣದ ನಾಗಪ್ಪ ಕಾಲೋನಿ ಸ.ಹಿ.ಪ್ರಾ. ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮುಂಜಾಗ್ರತೆ ಅಗತ್ಯ: ಹಲ್ಲುಗಳನ್ನು ಆರೋಗ್ಯವಾಗಿಟ್ಟುಕೊಂಡರೆ ಹಲವು ರೋಗಗಳಿಂದ ಮುಕ್ತವಾಗಬಹುದು, ಇದಕ್ಕಾಗಿ ಮುಂಜಾಗ್ರತೆ ಅಗತ್ಯವಿದೆ ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯೆ ಸುನೀತ ಗಂಗಾಧರ್ ಶಿಬಿರ ಉದ್ಘಾಟಿಸಿ, ಇಂತಹ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಪುರಸಭೆ ಕಂದಾಯ ಅಧಿಕಾರಿ ಶೇಷಪ್ಪ ಅಧ್ಯಕ್ಷತೆ ವಹಿಸಿದ್ದರು.
ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್. ವೀರಭದ್ರಪ್ಪ ಮಾತನಾಡಿದರು. ಪುರಸಭೆ ಸದಸ್ಯೆ ಪುಟ್ಟಮ್ಮ ಅಣ್ಣಪ್ಪ, ಡಾ. ಶಿವಕುಮಾರ್, ಸತೀಶ್, ಜಗದೀಶ್ ಮೊದಲಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

