'ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್' ವಾರ್ಷಿಕೋತ್ಸವ
ಚಿಕ್ಕಮಗಳೂರು: ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್ ಸಂಸ್ಥೆ ತನ್ನ 7ನೇ ವಾರ್ಷಿಕೋತ್ಸವ ಸಮಾರಂಭವನ್ನು ಗುರುವಾರ ನಗರದಲ್ಲಿ ವೈಭವದಿಂದ ಆಚರಿಸಿತು.
ಸಕಲೇಶಪುರದ ಧರ್ಮಗುರು ವಿನ್ಸೆಂಟ್ ಡಿಸೋಜಾ ಅವರ ನೇತೃತ್ವದಲ್ಲಿ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಕೊಂಕಣಿ ಭಾಷೆಯಲ್ಲಿ ವಿಶೇಷ ಬಲಿಪೂಜೆ ನೆರವೇರಿಸಿದರು.
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಬಲಿಪೂಜೆಯಲ್ಲಿ ಪಾಲ್ಗೊಂಡ ಕೊಂಕಣಿ ಸಮುದಾಯದ ಭಕ್ತರು, ಜನಾಂಗದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುವಂತೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಅರ್ಸೋ ಎಂಬ ಕೊಂಕಣಿ ಮಾಸ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ದೇವಾಲಯದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಾದ ಸ್ಟ್ಯಾನಿ ಡಿಸಿಲ್ವಾ ಮತ್ತು ಲೂಯೀಸ್ ಅವರನ್ನು ಗೌರವಿಸಲಾಯಿತು.
ಚುರುಕು ಸಂಭಾಷಣೆ, ಮನೋಜ್ಞ ಅಭಿನಯದ ಮೂಲಕ ಕಲಾವಿದರು 3 ಗಂಟೆಗೂ ಅಧಿಕ ಕಾಲ ಸಭಿಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.
ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಜರುಗಿತು. ಕ್ಯಾಥೋಲಿಕ್ ಕೊಂಕಣ್ ರಾಕಣ್ ಸಂಚಾಲನ್ನ ಅಧ್ಯಕ್ಷ ಪ್ರಮೋದ್ ಪಿಂಟೋ, ಕಾರ್ಯದರ್ಶಿ ಸಿಲ್ವೆಸ್ಟರ್ ಸಾಲ್ಡಾನಾ, ಸಿರಿಲ್ ರೆಬೆಲ್ಲೋ, ಕಿರಣ್ ಡಿಸೋಜಾ, ಎರಿಕ್ ಡಿಸಿಲ್ವಾ, ಸೋಫಿ, ಲೀನಾ ಲೋಬೋ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

