ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಕನ್ನಡ-ಇಂಗ್ಲೀಷ್ ನಿಘಂಟು ವಿತರಣೆ

Published On :

ನರಸಿಂಹರಾಜಪುರ: ಸೀತೂರು-ಕುದುರೆಗುಂಡಿ ರೋಟರಿ ಸಮುದಾಯ ದಳ,ಕೊಪ್ಪ ರೋಟರಿ ರೂರಲ್, ಬೆಂಗಳೂರು ರೋಟರಿ ಕ್ಲಬ್ ಪಶ್ಚಿಮ ವಲಯ ಹಾಗೂ ಬೆಂಗಳೂರಿನ ಮೆಂಡ್ ಫೌಂಡೇಶನ್ ಸಹಯೋಗದಲ್ಲಿ ಗ್ರಾಮೀಣ ಮಕ್ಕಳಿಗೆ ಕನ್ನಡ- ಇಂಗ್ಲೀಷ್ ನಿಘಂಟುಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವು ವಿವಿಧ ಶಾಲೆಗಳಲ್ಲಿ ಶುಕ್ರವಾರ ನಡೆಯಿತು.
ಕಾನೂರು ಸರ್ಕಾರಿ ಪ್ರೌಢ ಶಾಲೆ, ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ, ಬೆಳ್ಳೂರು ಪ್ರೌಢ ಶಾಲೆ, ಕುದುರೆಗುಂಡಿ, ಸೀತೂರು ವ್ಯಾಪ್ತಿಯ ಮಾದ್ಯಮಿಕ ಶಾಲೆಗಳ ಒಟ್ಟು 240 ಮಕ್ಕಳಿಗೆ ಕನ್ನಡ-ಇಂಗ್ಲೀಷ್ ನಿಘಂಟುಗಳನ್ನು ವಿತರಿಸಲಾಯಿತು.
ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ಮತ್ತು 9 ನೇ ತರತಿಯ ಮಕ್ಕಳಿಗೆ ನಿಘಂಟುಗಳನ್ನು ವಿತರಿಸಿ ಕೊಪ್ಪ ರೋಟರಿ ರೂರಲ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಡಾ. ಭವಾನಿ ಶಂಕರ್ ಮಾತನಾಡಿದರು.
ಅಧ್ಯಕ್ಷತೆಯನ್ನು ಸೀತೂರು- ಕುದುರೆಗುಂಡಿ ರೋಟರಿ ಸಮುದಾಯದಳದ ಅಧ್ಯಕ್ಷ ಎಸ್. ಉಪೇಂದ್ರರಾವ್ ವಹಿಸಿದ್ದರು. ಕಾರ್ಯದರ್ಶಿ ಎಚ್.ವಿ. ವಿಶ್ವನಾಥ ರಾಗೋಡು, ಮ್ಯಾಮ್ಕೋಸ್ ನಿರ್ದೇಶಕ ವೈ.ಎಸ್. ಸುಬ್ರಮಣ್ಯ, ಸೀತೂರು ರೋಟರಿ ಸಮುದಾಯದಳದ ಮಾಜಿ ಅಧ್ಯಕ್ಷ ಬಿ.ವಿ. ಗೋಪಿನಾಥ್ ಉಪಸ್ಥಿತರಿದ್ದರು.

ಚಿಗುರು ಕಾರ್ಯಕ್ರಮ
ಶೃಂಗೇರಿ:  ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಶ್ರೀಅಭಿನವ ರಮಾನಂದ ಪ್ರೌಢಶಾಲೆಯಲ್ಲಿ ಚಿಗುರು ಕಾರ್ಯಕ್ರಮ ನಡೆಯಿತು. ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೆಟ್ಟಗೆದ್ದೆ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಉಪಾಧ್ಯಕ್ಷ ನೂತನ್ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನವೀನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.