ಆರ್ಥಿಕಾಭಿವೃದ್ಧಿಗೆ ಶಿಕ್ಷಣ ಅಗತ್ಯ
ಚಿಕ್ಕಮಗಳೂರು: ಜ್ಞಾನದ ಯಾತ್ರೆಗೆ ಕೊನೆಯಿಲ್ಲ. ಸಾಮರಸ್ಯ, ಸದ್ಭಾವನೆ ವೈಜ್ಞಾನಿಕ ತಳಹದಿಯಲ್ಲಿ ಯುವಚೇತನಗಳನ್ನು ಅತಿನೂತನಗೊಳಿಸುವುದು ಇಂದಿನ ಶಿಕ್ಷಣದ ಸವಾಲು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಎಂ. ರುದ್ರಸ್ವಾಮಿ ಹೇಳಿದ್ದಾರೆ.
ನಗರದ ಮೌಂಟೆನ್ ವ್ಯೂ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಮುಕ್ತಾಯ ಸಮಾರಂಭದಲ್ಲಿ ಬುಧವಾರ ಸಮಾರೋಪ ಭಾಷಣದಲ್ಲಿ ಆರ್ಥಿಕ ಅಭಿವೃದ್ಧಿಗೆ ಶಿಕ್ಷಣ ಹಾಗೂ ಸಾಂಸ್ಕೃತಿಕ- ಸಾಮರಸ್ಯ ಪ್ರಭಾವಿಸುತ್ತದೆ ಎಂದು ಪ್ರತಿಪಾದಿಸಿದರು.
ಪೂರ್ವಾಗ್ರಹ ಪೀಡಿತರಾಗಬೇಡಿ: ದಲಾಗುತ್ತಿರುವ ಜಗತ್ತಿಗೆ ತೆರೆದುಕೊಳ್ಳಬೇಕು. ಬೇರೆ ಸಂಸ್ಕೃತಿ ಧರ್ಮದೊಂದಿಗೆ ಸಹನೀಯವಾದ ಸಂಬಂಧ ಹೊಂದಬೇಕು. ಪೂರ್ವಾಗ್ರಹಪೀಡಿತವಾದ ತಪ್ಪು ಅಭಿಪ್ರಾಯಗಳನ್ನು ಹರಡುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಶತ್ರುತ್ವ ವ್ಯಾಪಕವಾಗುವುದರ ಜೊತೆಗೆ ಕೆಡುಕು ಹೆಚ್ಚುತ್ತದೆ. ಇವೆಲ್ಲಾ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಂಟೆನ್ ವ್ಯೂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಬೀಬಾ ಎನ್. ಪಾಷ, ಮಾನವೀಯತೆ ಇಂದಿನ ಆದ್ಯತೆಯಾಗಬೇಕು. ಸಾಧ್ಯವಾದಷ್ಟು ನೆರವು ನೀಡುವ ಮನೋಧರ್ಮ ಬೆಳೆಸಿಕೊಳ್ಳಬೇಕು. ಪರೀಕ್ಷೆಯ ಅಂಕ, ಸಾಧನೆಗಳಿಗಿಂತ ಮಾನವೀಯ ಸ್ಪಂದನೆ ಸಮಾಜಕ್ಕೆ ನಮ್ಮನ್ನು ಪರಿಚಯಿಸುತ್ತದೆ ಎಂದು ಹೇಳಿದರು.
ಬಹುಮಾನ ವಿತರಿಸಿದ ನಗರಸಭಾ ನಿಯೋಜಿತ ಸದಸ್ಯ ಸುಧೀರ್ ಮಾತನಾಡಿ, ಪದವಿಪೂರ್ವ ಶಿಕ್ಷಣ ವ್ಯಕ್ತಿಯ ಬದುಕಿನಲ್ಲಿ ಮಹತ್ವದ ತಿರುವು. ಇಲ್ಲಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಂಡು ಶಿಕ್ಷಕರ ಮಾರ್ಗದರ್ಶನದಂತೆ ನಡೆದರೆ ಮಹತ್ವದ ಸಾಧನೆ ಮಾಡಬಹುದೆಂದರು.
ಕಾಲೇಜಿನ ಶೈಕ್ಷಣಿಕ ಪ್ರಗತಿಯನ್ನು ಪ್ರಾಂಶುಪಾಲೆ ತಸ್ನೀಮ್ ಫಾತೀಮಾ ವಿವರಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ವರದಿಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ಶಿವರಾಜ್ ನೀಡಿದರು. ಪದವಿ ಕಾಲೇಜು ಪ್ರಾಂಶುಪಾಲ ಇಮ್ತಿಯಾಜ್ ಅಲಿ, ಉಪ ಪ್ರಾಂಶುಪಲೆ ಜಲ್ಲಿ ಕೆ. ಜಾರ್ಜ್, ಆಡಳಿತಾಧಿಕಾರಿ ಭದ್ರೇಗೌಡ, ಎನ್.ಎಸ್.ಎಸ್. ಅಧಿಕಾರಿ ಎಚ್.ಪಿ. ರಘು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

