ಒತ್ತುವರಿ ತೆರವಿಗೆ ಹೆದರಿ ರೈತ ಆತ್ಮಹತ್ಯೆ
ಕ.ಪ್ರ.ವಾರ್ತೆ, ಮೂಡಿಗೆರೆ, ಜ. 9
ಸರ್ಕಾರ ಡಾ. ಬಾಲಸುಬ್ರಹ್ಮಣ್ಯಂ ವರದಿ ಅನ್ವಯ ಕಂದಾಯ ಭೂಮಿ ಒತ್ತುವರಿ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ತಲಾತಲಾಂತರದಿಂದ ವಾಸಿಸುತ್ತಿರುವ ತಮ್ಮ ಭೂಮಿ ಹೋಗುವ ಭೀತಿಯಲ್ಲಿ ಒತ್ತುವರಿ ತೆರವಿಗೆ ಹೆದರಿದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ದೊಡ್ಡನಂದಿಯಲ್ಲಿ ಬುಧವಾರ ನಡೆದಿದೆ.
ಶ್ರೀನಿವಾಸಗೌಡ (60) ನೇಣಿಗೆ ಶರಣಾದ ವ್ಯಕ್ತಿ. ದೊಡ್ಡನಂದಿಯಲ್ಲಿ ತಲತಲಾಂತರದಿಂದ ಕಂದಾಯ ಭೂಮಿಯಲ್ಲಿ ವಾಸಿಸುತ್ತಿದ್ದ ಶ್ರೀನಿವಾಸಗೌಡರಿಗೆ ಕೆಲವು ಅಧಿಕಾರಿಗಳು ನಿಮ್ಮ ಭೂಮಿಯನ್ನು ತೆರವು ಮಾಡಲಾಗುವುದು ಎಂದು ತಿಳಿಸಿದ್ದರು.
ಅವರ ಅಕ್ಕ ಪಕ್ಕದ ಜಮೀನಿನ ತೆರವಿಗೂ ನೋಟಿಸ್ ನೀಡಿದ್ದು, ಮುಂದೆ ತನ್ನ ಭೂಮಿಯನ್ನು ತೆರವುಗೊಳಿಸಿ ದರೆ ಭವಿಷ್ಯ ಅತಂತ್ರವಾಗುವುದೆಂದು ಹೆದರಿ ಮನನೊಂದು ಜ.8 ರ ಬುಧವಾರದಂದು ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತ್ನಿ ಶೈಲಾ ದೂರು ನೀಡಿದ್ದಾರೆ.
ಪ್ರತಿಭಟನೆ: ರೈತ ಶ್ರೀನಿವಾಸಗೌಡರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ, ಬೆಳೆಗಾರರ ಸಂಘ, ಕರವೇ, ರೈತಸಂಘ ಸೇರಿದಂತೆ ಇತರ ಒಕ್ಕೂಟಗಳು ಮೂಡಿಗರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ನೀತಿ ನಿಯಮಗಳೇ ಕಾರಣ
ಮೂಡಿಗೆರೆ: ಬುಧವಾರ ನೇಣಿಗೆ ಶರಣಾದ ಬೆಳೆಗಾರ ದೊಡ್ಡನಂದಿಯ ಶ್ರೀನಿವಾಸಗೌಡರ ಸಾವಿಗೆ ಸರ್ಕಾರದ ನೀತಿ, ನಿಯಮಗಳೇ ಕಾರಣವಾಗಿದೆ ಎಂದು ಶಾಸಕ ಬಿ.ಬಿ. ನಿಂಗಯ್ಯ ಆರೋಪಿಸಿದ್ದಾರೆ.
ದೊಡ್ಡನಂದಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಬಾಲಸುಬ್ರಹ್ಮಣ್ಯ ವರದಿಯಲ್ಲಿ ಯಾವುದೇ ನೈಜತೆ ಇಲ್ಲ. ಆದರೆ ಸರ್ಕಾರ ಅವರ ವರದಿಯನ್ನೇ ಅನುಷ್ಟಾನ ಗೊಳಿಸುತ್ತಿರುವ ಪರಿಣಾಮ ನಿಜ ವರದಿ ತಿಳಿಯದಂತಾಗಿದೆ ಎಂದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

