ಚಿಕ್ಕಮಗಳೂರು

ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

Published On :

ಕ.ಪ್ರ.ವಾರ್ತೆ, ಬೀರೂರು, ಜ. 9
ಪಟ್ಟಣದ ಪತ್ರೆ ಕೆ. ಶಿವಪ್ಪಯ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವಾಗಿ ಬೇಕಿರುವ ಸೌಲಭ್ಯಗಳನ್ನು ಶೀಘ್ರವಾಗಿ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತ ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ನೂತನ ಆ್ಯಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಿ ಹಾಗು ಜಿಪಂ ಸದಸ್ಯರ ಅನುದಾನದಲ್ಲಿ ಮಂಜೂರಾದ ಆಸ್ಪತ್ರೆಯ ಹೊರ ಆವರಣದ ಕಾಂಕ್ರಿಟ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸಾಕಷ್ಟು ಸಮಸ್ಯೆ: ವೈದ್ಯರ ಕೊರತೆ, ಇರುವ ವೈದ್ಯರು ಗ್ರಾಮೀಣ ಭಾಗಕ್ಕೆ ಬರಲು ನಿರಾಸಕ್ತಿ ತೋರುವುದು ಹಾಗೂ  ಸರ್ಕಾರಗಳ ಕೆಲ ಜಡ್ಡುಗಟ್ಟಿದ ನಿಯಮಗಳಿಂದಾಗಿ ಇಂದು ಸಾಕಷ್ಟು ಸಮಸ್ಯೆ ಎದುರಾಗಿದೆ. ಹಿಂದೆ ಎಂಬಿಬಿ ಎಸ್ ಆದವರು ಸರ್ಕಾರಿ ಸೇವೆ ಸಲ್ಲಿಸಿ ಆನಂತರ ಉನ್ನತ ವ್ಯಾಸಾಂಗ ಮಾಡಬೇಕಿತ್ತು. ಈಗ ನೇರ ಅವಕಾಶ ಸಿಕ್ಕಿರುವುದು ಸರ್ಕಾರಿ ಆರೋಗ್ಯ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಆಸ್ಪತ್ರೆಗೆ ತುರ್ತಾಗಿ ಬೇಕಾಗಿರುವ ಮಕ್ಕಳ ತಜ್ಞರ ನೇಮಕ, ಡಿ. ದರ್ಜೆ ನೌಕರರ ನೇಮಕ ಪರಿಕರಗಳ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಹಾಗೂ ಹೆಚ್ಚಿನ ಪ್ರಮಾಣದ ಔಷಧ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವೈದ್ಯಾಧಿಕಾರಿ ಡಾ ವಾಸುದೇವಮೂರ್ತಿ ಮಾತನಾಡಿ, ಈ ಆಸ್ಪತ್ರೆಯು 50 ಹಾಸಿಗೆಗಳುಳ್ಳದಾಗಿದ್ದು, ಇಲ್ಲಿಗೆ ಬರುವ ಒಳ ರೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸೌಲಭ್ಯ ಕಲ್ಪಿಸಲು ತೊಡಕಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ನೀರಿನ ವ್ಯವಸ್ಥೆಗೆ ಕ್ರಮ ಹಾಗೂ ಔಷಧಿಗಳ ಕೊರತೆಯಾಗದಂತೆ ಹೆಚ್ಚಿನ ಔಷಧಿ ಬಿಡುಗಡೆಗೆ ಕ್ರಮ ಕೈಗೊಳ್ಳಲು ಶಾಸಕರಿಗೆ ಮನವಿ ಮಾಡಿದರು.
ಜಿಪಂ ಸದಸ್ಯ ಬಿ.ಪಿ. ನಾಗರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್. ಕೆ.ಪ್ರಭು, ಮಾಜಿ ತಾಪಂ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಪುರಸಭಾ ಸದಸ್ಯೆ ವಸಂತ ರಮೇಶ್, ತಜ್ಞ ವೈದ್ಯ ಡಾ. ದಯಾನಂದ್, ಡಾ ಕೆಂಚೇಗೌಡ, ತಿಮ್ಮೇಗೌಡ, ಸೋಮಶೇಖರ್, ಅಂಜನಪ್ಪ, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.