ಚಿಕ್ಕಮಗಳೂರು

ಚುಂಚಶ್ರೀ ಪ್ರಶಸ್ತಿ ಹಣ ದೇಣಿಗೆ ನೀಡಿದ ಗೋವಿಂದೇಗೌಡ

Published On :

ಕ.ಪ್ರ.ವಾರ್ತೆ, ಕೊಪ್ಪ, ಜ.10
ಆದಿಚುಂಚನಗಿರಿ ಮಹಾಸಂಸ್ಥಾನದ ಚುಂಚಶ್ರೀ ಪ್ರಶಸ್ತಿಯೊಂದಿಗೆ ಗೌರವಧನವಾಗಿ ನೀಡಿದ್ದ 50000 ನಿಧಿಯನ್ನು ಮಲೆನಾಡು ಗಾಂಧಿ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲು ಲಯನ್ಸ್ ಸಂಸ್ಥೆಗೆ ಶುಕ್ರವಾರ ದೇಣಿಗೆಯಾಗಿ ನೀಡಿದರು.
ಮಾಜಿ ಸಚಿವ ಎಚ್.ಜಿ. ಗೋವಿಂದಗೌಡರ ಮಣಿಪುರದ ಸ್ವಗೃಹದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಪಿಎಂಜೆಎಫ್ ಲಯನ್ಸ್ ಕೆ.ಸಿ.ಪ್ರಭು ಅವರು ಗೋವಿಂದೇಗೌಡರಿಂದ ಚೆಕ್ ಸ್ವೀಕರಿಸಿದರು.
ವಿದ್ಯಾರ್ಥಿಗಳ ಆಯ್ಕೆ ಮಾಡಿ ವಿತರಣೆ: ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ಹೆಗ್ಡೆ ಮಾತನಾಡಿ, ಸರಳತೆ, ಪ್ರಾಮಾಣಿಕತೆ, ದಕ್ಷತೆಯಿಂದ ಖ್ಯಾತರಾದ ಮಲೆನಾಡು ಗಾಂಧಿ ಗೋವಿಂದೇಗೌಡರು ನೀಡಿರುವ ನಿಧಿಯಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಆರ್ಥಿಕವಾಗಿ ಹಿಂದುಳಿದ ಹಾಗೂ ಕಲಿಕೆಯಲ್ಲಿ ಉತ್ತಮ ಸಾಮರ್ಥ್ಯ ಸಾಧಿಸಿರುವ 3-4 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯಪಾಲರ ಅಧಿಕೃತ ಭೇಟಿ ವೇಳೆ ಪ್ರೋತ್ಸಾಹ ಧನವಾಗಿ ವಿತರಿಸಲಾಗುವುದೆಂದು ತಿಳಿಸಿದರು.
ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಸಿ. ಪ್ರಭು, ಸ್ಥಳೀಯ ಕ್ಲಬ್ ಉತ್ತಮ ಸೇವಾ ಕಾರ್ಯ ಕೈಗೊಂಡಿದೆ. ಇಂದು ರಸ್ತೆಗಳಿಗೆ ಮಾರ್ಗಸೂಚಿ ಫಲಕ ಅಳವಡಿಸಿ ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಥ್ರಡ್ ಮಿಲ್ ಕೊಡುಗೆ ನೀಡಿ, ಕಾಚ್‌ಕಲ್‌ನಲ್ಲಿ ಪಶು ತಪಾಸಣಾ ಶಿಬಿರ ಏರ್ಪಡಿಸಿದೆ.
ಇಲ್ಲಿನ ಕ್ಲಬ್‌ನಲ್ಲಿ ನಡೆದ ಅಂತಾರಾಷ್ಪ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಜಯಂತ್ ಪ್ರಥಮ ಸ್ಥಾನ ಗಳಿಸಿರುವುದಲ್ಲದೆ, ನಿಧಿ 8ನೇ ಸ್ಥಾನ ಪಡೆದಿದ್ದಾರೆ. ನೇತ್ರ ಚಿಕಿತ್ಸಾ ಶಿಬಿರ, ಆರೋಗ್ಯ ಶಿಬಿರ ಹಾಗೂ ಬೆಲೆ ಬಾಳುವ ಅತ್ಯಮೂಲ್ಯ ಸಸ್ಯಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದರು.
ಲಯನ್ಸ್ ಮಾಜಿ ರಾಜ್ಯಪಾಲ ಎಂ.ಡಿ. ಬಾಲಕೃಷ್ಣ, ಶಿರೀಶ್ ಗುರ್ಜರ್, ವೆಂಕಟೇಶ್, ಲಯನ್ಸ್ ಕಾರ್ಯದರ್ಶಿ ಸುಧೀರ್, ಮಣಿಕಾಂತ್, ಜಯಪ್ರಕಾಶ್, ಪ್ರಸನ್ನ, ವಗಳೆ ನಾಗರಾಜ್, ಸಂಜಯ್, ನಟರಾಜ್, ದಿವಾಕರ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.