ಚಿಕ್ಕಮಗಳೂರು

'ಮಾಹಿತಿ ಕೊರತೆಯಿಂದ ಅವನತಿಯತ್ತ ಕೃಷಿ'

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಜ.10
ಭಾರತ ಕೃಷಿ ಪ್ರಧಾನವಾದ ದೇಶ. ಕೃಷಿಕ ಭಾರತದ ಬೆನ್ನೆಲಬು. ಆದರೆ ರೈತ ಮತ್ತು ಬೆಳೆಗಾರರಿಗೆ ಮಾಹಿ ತಿಯ ಕೊರತೆಯಿಂದ ಇಂದು ಕೃಷಿ ಅವನತಿಯುತ್ತ ಸಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಎ.ಜೆ. ಸುಬ್ರಾಯ ಹೇಳಿದರು.
ಹ್ಯಾಂಡ್‌ಪೋಸ್ಟ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರಗಳ ಆಶ್ರಯದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪನ್ನಗಳ ಸಂಸ್ಕರಣಾ ಹಾಗೂ ಅಣಬೆ ಕೃಷಿಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕೆಯ ಬೆಳೆಗಳಾದ ತರಕಾರಿ, ಹಣ್ಣುಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿದಲ್ಲಿ ಲಾಭವನ್ನು ಪಡೆಯಬಹುದು. ಮನೆಯ ಸಮೀಪದಲ್ಲೇ ಅಣಬೆ ಕೃಷಿಯನ್ನು ಮಾಡಿ ಲಾಭಗೊಳಿಸಬಹುದು ಎಂದರು.
ಪ್ರಯೋಜನವಾಗಲಿ:  ತಾ.ಪಂ. ಸದಸ್ಯ ರಂಜನ್ ಅಜಿತ್‌ಕುಮಾರ್ ಮಾತನಾಡಿ, ಇಂಥ ಕಾರ್ಯಾಗಾರಗಳಿಗೆ 50 ಜನರಿಗೆ ತರಬೇತಿಯನ್ನು ನೀಡಲು ತಾಲೂಕು ಪಂಚಾಯಿತಿ ವತಿಯಿಂದ ಹಣ ಬಿಡುಗಡೆ ಮಾಡುತ್ತಿದ್ದು, ಪ್ರತಿಯೊಬ್ಬ ರೈತರು ಮತ್ತು ಬೆಳೆಗಾರರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತರಬೇತಿಯ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ಸಂಯೋಜಕಿ ಡಾ. ಸುಕನ್ಯಾ ಮಾತನಾಡಿ. ಇಂದಿನ ದಿನಗಳಲ್ಲಿ ಸಂರಕ್ಷ ಣೆ ಮತ್ತು ಮೌಲ್ಯವರ್ಧನೆ ಅಗತ್ಯ. ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ಅಣಬೆಯಲ್ಲಿ ಪ್ರೋಟಿನ್, ವಿಟಮಿನ್‌ಗಳು ಮತ್ತು ಖನಿಜಾಂಶ ಸಿಗುತ್ತದೆ. ವರ್ಷವಿಡೀ ಬೆಳೆಯಬಹುದಾದ ಬೆಳೆಯಾಗಿರುವ ಅಣಬೆ ಕೃಷಿ ಲಾಭದಾಯಕವಾಗಿದೆ ಮತ್ತು ಕಾರ್ಮಿಕರ ಅಗತ್ಯವೆ ಇರುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿಕ್ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕಕುಮಾರ್ ಮಾತನಾಡಿ, ಅಣಬೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ವಿಷಕಾರಿ ಅಣಬೆ ಮತ್ತು ತಿನ್ನಲು ಯೋಗ್ಯವಾದ ಅಣಬೆಗಳಿವೆ. ಕಪ್ಪೆಚಿಪ್ಪು ಅಥವಾ ಡಿಂಗ್ರಿ ಅಣಬೆ, ಬತ್ತದ ಹುಲ್ಲಿನ ಅಣಬೆ, ಬಿಳಿಗುಂಡಿ ಅಣಬೆ, ಹಾಲು ಅಣಬೆ ಕೃಷಿಗೆ ಯೋಗ್ಯವಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಲಾಭವನ್ನು ಪಡಿಯುವಂತೆ ಮನವಿಗೊಂಡರು.
ಹಿರಿಯ ತೋಟಗಾರಿಕಾ ನಿರ್ದೇಶಕಿ ದಿವ್ಯಾ ಎನ್. ಮಾತನಾಡಿ, ಮನೆಯ ಅಂಗಳದಲ್ಲೇ ಅಣಬೆ ಕೃಷಿ ಲಾಭದಾಯಕ ಕೃಷಿಯಾಗಿದೆ. ಮಹಿಳೆಯರು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಸಖರಾಯ ಪಟ್ಟಣದ ಪರಿವರ್ತಕ ಸಂಸ್ಥೆಯ ಶಿವಣ್ಣ, ಹಾಸನ ಕೃಷಿ ಕಾಲೇಜಿನ ಸಹ ಪ್ರಾದ್ಯಾಪಕ ಡಾ. ಉಮಾಶಂಕರ್ ಎನ್. ಹಲಸು ಮತ್ತು ಅಣಬೆ ಕೃಷಿಯ ಮೌಲ್ಯವರ್ಧನೆ ಬಗ್ಗೆ ತರಬೇತಿ ನೀಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ದೇವರಾಜ್ ಸಬ್ಲಿ, ಟಿ.ಪಿ. ಭರತ್‌ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.