ಚಿಕ್ಕಮಗಳೂರು

ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ

Published On :

ಮೂಡಿಗೆರೆ: ಸಮಾಜದಲ್ಲಿ ಒಬ್ಬ ಉತ್ತಮ ನಾಯಕನಾಗಲು ಜೆಸಿಐ ಸಂಸ್ಥೆಯಿಂದ ಕೊಡುವ ತರಬೇತಿಗಳಿಂದ ಮಾತ್ರ ಸಾಧ್ಯ ಎಂದು ಕಳಸ ಜೆಸಿಐ ಸಂಸ್ಥೆಯ ಅಧ್ಯಕ್ಷ ಜೆಸಿ ಸುದೀಶ್ ಸುವರ್ಣ ಹೇಳಿದರು.
ಪಟ್ಟಣದ ರಕ್ಷಾ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಕಳಸ ಜೆಸಿಐ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವದ ಬಗ್ಗೆ ಏರ್ಪಡಿಸಲಾಗಿದ್ದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಹ ತರಬೇತಿಗಳನ್ನು ನೀಡುವಂತಹ ಸಂಸ್ಥೆ ಜೆಸಿಐ ಮಾತ್ರ. ಸಂಸ್ಥೆಯಿಂದ ನೀಡುವ ತರಬೇತಿಗಳಿಂದ ಸಮಾಜಕ್ಕೆ ವರ್ಷಕ್ಕೊಬ್ಬ ನಾಯಕನನ್ನು ನೀಡುತ್ತಿರುವ ಏಕೈಕ ಸಂಸ್ಥೆ ಎಂದರು. ಇದೇ ಸಂದರ್ಭ ತರಬೇತಿ ನೀಡಿದ ಜೆಸಿ ಪಾಂಡುರಂಗ ಮಾತನಾಡಿ, ಪ್ರತಿಯೊಬ್ಬನಲ್ಲಿ ನಾಯಕತ್ವದ ಗುಣಗಳಿವೆ. ಅದನ್ನು ಸಮಯ ಸಂದರ್ಭ ನೋಡಿ ಬಳಸಿಕೊಳ್ಳಬೇಕು. ನಾಯಕರು ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಮುಖ್ಯವಾಗಿ ಗುರುತಿಸಿಕೊಳ್ಳುವುದೇ ನಾಯಕತ್ವದ ಮೊದಲ ಹೆಜ್ಜೆ ಎಂದರು. ಈ ಸಂದರ್ಭ ಜೆಸಿಐಯ ನಿಕಟಪೂರ್ವ ಅಧ್ಯಕ್ಷ ಜಗದೀಶ್ ನಾಯ್ಕ್, ಕಾರ್ಯದರ್ಶಿ ಶಿವರಾಮ ಪಂಡಿತ್, ಕಸಪಾ ತಾ. ರಾಧಾಕೃಷ್ಣ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.