ಜನಮನ ರಂಜಿಸಿದ 'ಹುಲಿ ಬಂತು ಹುಲಿ' ನಾಟಕ
ಬಾಳೆಹೊನ್ನೂರು, ಜ.15
ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಜೀವಂತವಾಗಿದೆ ಎಂಬುದಕ್ಕೆ ಸಮಸ್ಯೆಯ ಅರಿವು- ಹುಲಿ ಬಂತು ಹುಲಿ ನಾಟಕ ನೋಡಲು ಸೇರಿದ್ದ ಸಹಸ್ರಾರು ಪ್ರೇಕ್ಷಕರು ಸಾಕ್ಷಿಯಾಗಿದ್ದಾರೆ ಎಂದು ಉಪನ್ಯಾಸಕ ಎಂ.ಕೆ. ಪುಟ್ಟರಾಜು ಹೇಳಿದ್ದಾರೆ.
ಬಾಳೆಹೊನ್ನೂರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಮನೋಜ್ಞ ಅಭಿಮಯ: ಸ್ಥಳೀಯ ಕಲಾವಿದರೇ ನಾಟಕದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ಸಮಾಜಮುಖಿ ಪತ್ರಕರ್ತ ಹಾಗೂ ಸಾಹಿತಿ ಯಜ್ಞಪುರುಷಭಟ್ ಅವರು ರಚಿಸಿ, ನಿರ್ದೇಶಿಸಿ ಅಭಿನಯಿಸಿದ್ದು ವಿಶೇಷವಾಗಿತ್ತು. ದೈನಂದಿನ ಬದುಕಿನಲ್ಲಿ ರೈತರ ಬವಣೆ ಪರಿಹಾರ ವಿಳಂಬ, ಕೊಳೆರೋಗ, ಅಡಿಕೆ, ಕಾಳುಮೆಣಸು, ಕಾಫಿ ಇತರೆ ಬೆಳೆಗಳು ಹಾಗೂ ಕಾಡುಪ್ರಾಣಿಗಳ ದಾಳಿಯಿಂದ ತತ್ತರಿಸಿರುವ ರೈತನ ಒತ್ತುವರಿ ಸಮಸ್ಯೆಯನ್ನು ಮನೋಜ್ಞವಾಗಿ ಬಿಂಬಿಸಲಾಗಿ, ವೈದ್ಯರಿಲ್ಲದ ಆಸ್ಪತ್ರೆ ಚಿತ್ರಣವನ್ನೂ ಬಿಂಬಿಸಲಾಗಿತ್ತು.
ಗ್ರಾಮೀಣ ಆಡು ಭಾಷೆಯ ಸೊಗಡು ಜನರಿಗೆ ತಲುಪುವಂತಿದ್ದು, ನಾಟಕದಲ್ಲಿ ಕೇವಲ ಮನುಷ್ಯನ ಸಮಸ್ಯೆಯನ್ನು ಬಿಂಬಿಸಿದಲ್ಲದೆ, ಕಾಡುಪ್ರಾಣಿಗಳಿಗೆ ಒತ್ತುವರಿಯಿಂದಾದ ಸಮಸ್ಯೆಗೆ ಒತ್ತು ನೀಡಿದ್ದು, ಆಹಾರಕ್ಕೆ ಸಂಚಕಾರ, ಪ್ರವಾಸೋದ್ಯಮ ಹೆಸರಿನಲ್ಲಿ ರೆಸಾರ್ಟ್, ಶಿಕಾರಿ ಹಾಗೂ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಂಬಿಸಲಾಗಿತ್ತು. ಹುಲಿಯೋಜನೆಯ ಬಫರ್ ಜೋನ್ ಹಾಗೂ ಕೋರ್ ಜೋನ್ ಬಗ್ಗೆ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಅಧಿಕಾರಿಶಾಹಿಗಳ ವಿಳಂಬ ನೀತಿಯಿಂದಾಗಿ ಆತ್ಮಹತ್ಯೆ ಪ್ರಕರಣಗಳನ್ನು ಬಿಂಬಿಸಲಾಗಿದ್ದು, ಹಿರಿಯ ಹಾಗೂ ಕಿರಿಯ ಕಲಾವಿದರು ಬಣ್ಣ ಹಚ್ಚಿ ವೇದಿಕೆಯಲ್ಲಿ ಅಭಿನಯಿಸಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು ಎಂದರು.
ಪತ್ರಕರ್ತ ಯಜ್ಞಪುರುಷಭಟ್ ಮಾತನಾಡಿದರು. ನಿವೃತ್ತ ಉಪ ಪ್ರಾಚಾರ್ಯ ಟಿ.ಆರ್. ನಾಗಪ್ಪಗೌಡ, ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಹಿರಿಯಣ್ಣ, ಛಾಯಾಗ್ರಾಹಕ ಎಲ್.ಪಿ. ಜಗದೀಶ್, ಮಹೇಶ್ಚಂದ್ರ, ರಾ. ವೆಂಕಟೇಶ್, ಮಂಜುನಾಥ್ ತುಪ್ಪೂರು, ದಿವಿನ್, ಜಗದೀಶ್, ಸುನೀಲ್‌ಕುಮಾರ್, ನವೀನ್, ಅಖಿಲೇಶ್, ಗುರುಪ್ರಸಾದ್, ಆಶೋಕ್, ಕರುಣಾಕರ್, ಗ್ರಾಪಂ ಸದಸ್ಯ ಬಿ.ಕೆ. ಮಧುಸೂದನ್ ಸೇರಿದಂತೆ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚೈತನ್ಯ ವೆಂಕಿ, ಬಿ.ಸಿ. ಗೀತಾ, ಸತೀಶ್ ಅರಳಿಕೊಪ್ಪ, ತ್ರಿವಿಕ್ರಮ ಭಟ್, ಸಚಿನ್, ಪ್ರವೀಣ್ ಜಲಗಾರ್, ಮಂಜುನಾಥ್ ಶೆಟ್ಟಿ ಸಹ ಕಲಾವಿದರಾಗಿದ್ದರು. ಇದೇ ಸಂದರ್ಭ ಅಂಬ್ಯುಲೆನ್ಸ್ ಸೇವೆಯ ಬಗ್ಗೆ ಮಾಹಿತಿ ನೀಡಿ, ನಾಟಕದಲ್ಲಿ ಕಾಡಾನೆಯ ದಾಳಿಗೆ ಒಳಗಾದ ವ್ಯಕ್ತಿಯ ಆಸ್ಪತ್ರೆಗೆ ಸಾಗಿಸುವ ಅಣುಕು ಪ್ರಾತ್ಯಕ್ಷತೆ ನಡೆಸಲಾಯಿತು. ಆ್ಯಂಬುಲೆನ್ಸ್ ಸೇವೆಯ ಸ್ಟಾಫ್ ನರ್ಸ್ ಮಂಜುನಾಥ್, ವೀರಪ್ಪ, ಪಾಟೀಲ್, ಯೋಗೀಶ್, ಸುರೇಶ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

