ಚಿಕ್ಕಮಗಳೂರು

ಪೊಲೀಸ್ ಠಾಣೆಯಲ್ಲಿ ಸಂಕ್ರಾಂತಿ ಆಚರಣೆ

Published On :

ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಜ.15
ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ವತಿಯಿಂದ ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿ ಸಂಭ್ರಮಾಚರಣೆ ನಡೆಸಲಾಯಿತು.
ಠಾಣಾಧಿಕಾರಿ ಕೆ.ಆರ್. ರಘು ಮಾತನಾಡಿ, ಪ್ರತಿಯೊಂದು ಹಬ್ಬಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿದ್ದು, ಅವುಗಳ ಆಚರಣೆಯ ಹಿಂದೆ ವಿಶೇಷ ಮಹತ್ವ, ಸ್ಥಾನಮಾನಗಳು ಇವೆ. ರೈತರ ಹಬ್ಬವಾದ ಸಂಕ್ರಾಂತಿಯನ್ನು ಜೇಸಿ ಸಂಸ್ಥೆಯು ವಿಶೇಷ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಜೇಸಿ ಅಧ್ಯಕ್ಷ ಜಗದೀಶ್ ಮಾತನಾಡಿ, ಉತ್ತರಾಯಣದ ಪವಿತ್ರ ಹಬ್ಬವನ್ನು ತಮ್ಮ ಸಂಸ್ಥೆ ವತಿಯಿಂದ ಸಾರ್ವ್ವಜನಿಕರಿಗೆ ಎಳ್ಳುಬೆಲ್ಲ ಹಂಚುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜೇಸಿ ಕಾರ್ಯದರ್ಶಿ ಸಚಿನ್‌ಕುಮಾರ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ದಯಾಕರ್, ಜೇಸಿ ಪೂರ್ವಾಧ್ಯಕ್ಷ ಸುರೇಂದ್ರ ಶೀತಲ್, ಎಚ್.ಗೋಪಾಲ್, ಸತೀಶ್ ಅರಳಿಕೊಪ್ಪ, ಚೈತನ್ಯ ವೆಂಕಿ, ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್, ಜೇಸಿ ಸದಸ್ಯ ರೋಹಿತ್, ಕಾರ್ತಿಕ್ ಅಂಚನ್, ಎಎಸ್‌ಐ ಶಾಮಣ್ಣ ಉಪಸ್ಥಿತರಿದ್ದರು.
ನಂತರ ಜೇಸಿ ಸದಸ್ಯರು ಜೇಸಿ ವೃತ್ತದ ಆಟೋ ನಿಲ್ದಾಣ, ಗೂಡ್ಸ್ ಆಟೋ ನಿಲ್ದಾಣ ಮತ್ತು ಕಲಾರಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯ ಸ್ಥಳದಲ್ಲಿ ಹಾಗೂ ಸಾರ್ವಜನಿಕರಿಗೆ ಎಳ್ಳು ಬೆಲ್ಲ ಹಂಚಿ ಸಂಭ್ರಮಾಚರಣೆ ನಡೆಸಿದರು.
ಬಾಳೆಹೊನ್ನೂರಿನ ಜೇಸಿ ಸಂಸ್ಥೆ ವತಿಯಿಂದ ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿ ಸಂಭ್ರಮಾಚರಣೆ ನಡೆಸಲಾಯಿತು.
ಎನ್.ಆರ್.ಪುರದಲ್ಲಿ...
ನರಸಿಂಹರಾಜಪುರ:  ಮಕರ ಸಂಕ್ರಾಂತಿ ಹಬ್ಬವನ್ನು ಬುಧವಾರ ಸಂಭ್ರಮದೊಂದಿಗೆ ಆಚರಿಸಲಾಯಿತು. ವಿಶೇಷವಾಗಿ ಅಗ್ರಹಾರದಲ್ಲಿ ಮಹಿಳೆಯರು, ಮಕ್ಕಳು ಮನೆ, ಮನೆಗೆ ತೆರಳಿ ಎಳ್ಳು-ಬೆಲ್ಲ ನೀಡಿದರು.
ಮುತ್ತೆ ೈದೆಯರಿಗೆ ಎಳ್ಳು, ಬೆಲ್ಲ, ಕಬ್ಬು, ಕೊಬರಿ, ಅವರೆಕಾಯಿಯೊಂದಿಗೆ ಬಾಗಿಣ ನೀಡುವ ಸಂಪ್ರದಾಯ ನೆರವೇರಿಸಲಾಯಿತು.
ಮನೆಗಳಲ್ಲಿ ಪೊಂಗಲ್, ಕೋಸಂಬರಿಯೊಂದಿಗೆ ಸಿಹಿ ಊಟ ಮಾಡಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.