ಚಿಕ್ಕಮಗಳೂರು

ಸೂಪರ್ ಬಜಾರ್, ಕಾಫಿ ಖರೀದಿ ಕೇಂದ್ರ ಆರಂಭ

Published On :

ಕ.ಪ್ರ.ವಾರ್ತೆ    ಮೂಡಿಗೆರೆ    ಜ.16
ಗುಣಮಟ್ಟಕ್ಕಾಗಿ ಸ್ಪರ್ಧೆಯನ್ನು ಯಾವ ಸಹಕಾರ ಸಂಘ ಮಾಡುತ್ತವೋ ಅಂತಹ ಸಂಘಗಳು ಜನರ ವಿಶ್ವಾಸ ಗಳಿಸಬಲ್ಲವು ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಅಭಿಪ್ರಾಯಪಟ್ಟರು.
ಕಳಸದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಮಧೇನು ಸೂಪರ್ ಬಜಾರ್ ಹಾಗೂ ಕಾಫಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಒಂದು ಕಾಲದಲ್ಲಿ ನಶಿಸಿ ಹೊಗುತ್ತಿದ್ದ ಸಹಕಾರಿ ಸಂಘ ಇಂದು ಸಂಪದ್ಭರಿತವಾಗಿದೆ.
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಲಾಭಾಂಶ ಇಟ್ಟುಕೊಂಡು ಜನರ ನಂಬಿಕೆ ಉಳಿಸಿಕೊಂಡು ಬಂದಿದೆ. ಇದರಿಂದ ಸಂಸ್ಥೆಯನ್ನು ವೈವಿದ್ಯಮಯವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದರು.
ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಮಾತನಾಡಿ, ಗ್ರಾಹಕರಿಗೆ ದಿನಸಿ, ಸ್ಟೇಶನರಿ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು ಉತ್ತಮ ಗುಣಮಟ್ಟ ಮತ್ತು ಯೋಗ್ಯ ಬೆಲೆಯಲ್ಲಿ ನೀಡಲು ಸೂಪರ್ ಬಜಾರ್ ಆರಂಭಿಸಿದ್ದೇವೆ ಎಂದರು.
ಮೂಡಿಗೆರೆ ತಹಸೀಲ್ದಾರ್ ಕೆ.ಎ.ಎಸ್. ಶಿವರಂಗಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಫಿ ಖರೀದಿ ಕೇಂದ್ರವನ್ನು ತನೂಡಿ ಟಿ.ಎಸ್. ಜಗದೀಶ ಹೆಗ್ಡೆ, ದಾನಿಗಳ ನಾಮಫಲಕವನ್ನು ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ, ಟಿ.ಎಸ್. ಜಗದೀಶ ಹೆಗ್ಡೆ, ತಾಪಂ ಅಧ್ಯಕ್ಷ ಶೇಷಗಿರಿ, ಬಿ.ಎಲ್. ಸಂದೀಪ್‌ಗೌಡ, ಪಿ.ಐ ಅಬ್ದುಲ್ ಕರೀಂ, ಎ.ವಿ. ಮಹಬಲೇಶ್ವರ ಶಾಸ್ತ್ರಿ, ಗೋಪಾಲ ಎನ್.ಶೆಟ್ಟಿ, ರವಿ ಮುಂತಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.