ಚಿಕ್ಕಮಗಳೂರು

9ನೇ ದಿನ ಪೂರೈಸಿದ ದಸಂಸ ಸತ್ಯಾಗ್ರಹ

Published On :

ಸೊರಬ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಸಂಸ ತಾಲೂಕು ಶಾಖೆ ವತಿಯಿಂದ ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 9ನೇ ದಿನ ಪೂರೈಸಿದ್ದು, ಗುರುವಾರದಿಂದ ಆಮರಣಾಂತ ಉಪವಾಸಕ್ಕೆ ತಿರುಗಿದೆ.
ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿರುವ ತಾಲೂಕು ಸಂಚಾಲಕ ಬಸವರಾಜ್ ಹಶ್ವಿ ಮಾತನಾಡಿ, ಶಾಸಕ ಮಧು ಬಂಗಾರಪ್ಪ ಪಟ್ಟಣದಲ್ಲಿಯೇ ಸಂಚರಿಸುತ್ತಿದ್ದರೂ, ಸೌಜನ್ಯಕ್ಕಾದರೂ ಭೇಟಿ ನೀಡಿ ನಮ್ಮ ಬೇಡಿಕೆಗಳನ್ನು ಆಲಿಸಬಹುದಿತ್ತು ಎಂದರು.
ವಿಧಾನಸಭಾ ಚುನಾವಣೆಗೂ ಮೊದಲು ತಾಲೂಕಿನ ತಾಳಗುಪ್ಪ ಗ್ರಾಮದ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ತಾಳಗುಪ್ಪದಿಂದ ಶಿವಮೊಗ್ಗದ ನಡೆಸಿದ ಪಾದಯಾತ್ರೆ ಕೇವಲ ಚುನಾವಣೆ ಗಿಮಿಕ್ ಆಗಿದ್ದು, ಅವರಿಗೆ ಬಗರ್‌ಹುಕುಂ ರೈತರ ಪರವಾದ ಯಾವುದೇ ಕಾಳಜಿ ಇಲ್ಲ. ಅವರ ಗೋಸುಂಬೆ ಬಣ್ಣ ಈಗ ಬಯಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಬಸವಂತಪ್ಪ, ಎಂ. ಗಣೇಶಪ್ಪ, ಗೋವಿಂದಪ್ಪ, ಹೂವಪ್ಪ, ನಾಗರಾಜ್ ಕುಬಟೂರು, ಡಿ. ರಮೇಶ್ ಹಾಯ, ಟೌನ್ ಸಂಚಾಲಕ ಶೇಖರಪ್ಪ ಚಿಕ್ಕಶಕುನ ಬಗರ್‌ಹುಕುಂ ಸಾಗುವಳಿದಾರರಾದ ಯಲ್ಲಮ್ಮ, ಪರಮೇಶ್ವರಪ್ಪ, ಬಂಗಾರಮ್ಮ, ಶಾಂತಪ್ಪ, ಪ್ರಕಾಶ್, ನಿಂಗಪ್ಪ, ನಾಗಪ್ಪ, ಸಿದ್ದಪ್ಪ, ಕರಿಸಬಪ್ಪ, ಪಕ್ಕೀರಪ್ಪ, ದೇವೇಂದ್ರಪ್ಪ ಮೊಲಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.