ಚಿಕ್ಕಮಗಳೂರು

ಯಂತ್ರಕ್ಕೆ ಸಿಲುಕಿ ತುಂಡಾದ ಬಲಗೈ

Published On :

ಮೂಡಿಗೆರೆ: ಎಸ್ಟೇಟ್ವೊಂದರಲ್ಲಿ ಕಾಫಿ ಪಲ್ಪರಿಂಗ್ ಮಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಮಹಿಳೆಯೊಬ್ಬರ ಕೈ ಸಿಲುಕಿ ತುಂಡಾಗಿದೆ. ಕಳಸ ಸಮೀಪದ ಎಸ್ಟೇಟ್ವೊಂದರಲ್ಲಿ ಮುಮ್ಮಗೆಯ ಜಯಂತಿ(40)ಎಂಬವರು ಶುಕ್ರವಾರ ಕಾಫಿ ಪಲ್ಪರ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ವಸ್ತ್ರವೊಂದು ಪಲ್ಪರಿಂಗ್ ಯಂತ್ರಕ್ಕೆ ಸಿಕ್ಕಿಹಾಕಿಕೊಂಡಿದ್ದು, ತನ್ನ ವಸ್ತ್ರವನ್ನು ಬಿಡಿಸುವ ಯತ್ನದಲ್ಲಿದ್ದಾಗ ಬಲಗೈ ಯಂತ್ರದೊಳಗೆ ಸಿಲುಕಿ ಮೊಣಗೈ ಮೇಲಿಂದ ಸಂಪೂರ್ಣ ತುಂಡಾಗಿದೆ. ಕೂಡಲೇ ಅವರನ್ನು ಕಳಸ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಮಾಡಿ ನಂತರ ಮಂಗಳೂರು ಆಸ್ಪತ್ರಗೆ ದಾಖಲು ಮಾಡಲಾಗಿದೆ. ಪರದಾಟ: ಪಲ್ಪರ್ಗೆ ಸಿಕ್ಕಿ ಕೈತುಂಡು ಆಗಿರುವ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಳಸದಲ್ಲಿ ಆ್ಯಂಬುಲೆನ್ಸ್ ಇಲ್ಲದೆ  ಪರದಾಬೇಕಾಯಿತು. ನಿರ್ಲಕ್ಷ್ಯ: ಅನುಭವ ಇಲ್ಲದ ಮಹಿಳೆಯರನ್ನು ಅಪಾಯಾಕಾರಿಯಾದ ಕಾಫಿ ಪಲ್ಪರ್ ಕೆಲಸಕ್ಕೆ ನಿಯೋಜಿಸಿದ್ದು ಎಸ್ಟೇಟ್ ಮಾಲೀಕರ ನಿರ್ಲಕ್ಷ್ಯ ಎಂದು ಕಳಸ ಗ್ರಾಮಸ್ಥರ ಹಕ್ಕು ಸಂರಕ್ಷಣಾ ಪಡೆಯ ಮುಖ್ಯಸ್ಥ ರಿಜ್ವಾನ್ ದೂರಿದ್ದಾರೆ. ಮಹಿಳೆಗೆ ಜೀವಾಂಶವಾಗಿ 10 ಲಕ್ಷ ನೀಡಬೇಕು. ತಪ್ಪಿದ್ದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.