ಬಜೆಟ್ನಲ್ಲಿ ಹೆಬ್ಬೆ ಯೋಜನೆಗೆ ಹಣ ನೀಡಿ
ಕ.ಪ್ರ.ವಾರ್ತೆ, ಕಡೂರು, ಜ.20
ತಾಲೂಕಿನ ರೈತರ ಬಹು ದಿನದ ನಿರೀಕ್ಷೆ ಆಗಿರುವ ಹೆಬ್ಬೆ ಹಳ್ಳದಿಂದ ಮದಗಕೆರೆಗೆ ನೀರು ಹರಿಸುವ ಯೋಜನೆಗೆ ಆಯವ್ಯದಲ್ಲಿ ಹಣ ನೀಡಬೇಕು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಸಮುದಾಯದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಕಡೂರು ತಾಲೂಕು ಕುರುಬ ಸಮಾಜದಿಂದ ನಾಗರೀಕ ಸನ್ಮಾನ ನೀಡಿ ಮನವಿ ಸಲ್ಲಿಸಿದರು.
ಬರಗಾಲ: ತಾಲೂಕು 20 ವರ್ಷದಿಂದ ಸತತ ಬರಗಾಲ ಪೀಡಿತ ಪ್ರದೇಶವಾಗಿದೆ. ಈ ವರ್ಷವೂ ಬರ ಉಲ್ಬಣವಾಗಿದೆ. ಸರ್ಕಾರ ಬರಪೀಡಿತ ಪ್ರದೇಶ ಎಂದು ಕಡೂರು ತಾಲೂಕನ್ನು ಘೋಷಣೆ ಮಾಡಿದೆ. ತಾಲೂಕಿನಲ್ಲಿ ನೀರಿಲ್ಲದೆ ಅಡಕೆ, ತೆಂಗು ಒಣಗಿ ನಿಂತಿದೆ. ರೈತರ ಬೆಳೆಗಳೂ ಕೂಡ ನೆಲಕಚ್ಚುವ ಸ್ಥಿತಿಯಲ್ಲಿದೆ. ಇಳುವರಿ ಬಾರದೆ ಕಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ, ಕಡೂರು ತಾಲೂಕು ಅತೀ ಹಿಂದಳಿದ ತಾಲೂಕು ಎಂದು ಘೋಷಣೆಯಾಗಿದೆ. ಹೆಬ್ಬೆ ಹಳ್ಳದ ಯೋಜನೆ ಜಾರಿಯಿಂದ ನೀರನ್ನು ಗುರುತ್ವಾಕರ್ಷಣೆ ಮೂಲಕ ಮದಗದಕೆರೆ ಹಾಗೂ ಕೆಲಭಾಗದ 32 ಕೆರೆಗಳಿಗೆ ನೀರು ಹರಿಯಲಿದೆ. ಕಡೂರು ಅತಿ ಹಿಂದುಳಿದ ತಾಲೂಕು ಎಂದು ಘೋಷಣೆಯಾಗಿದೆ. ಹೆಬ್ಬೆ ಹಳ್ಳದಿಂದ 32 ಕೆರೆಗಳಿಗೆ ನೀರು ತಂಬಿಸುವ 19 ನಾಲೆಗಳಿಗೆ ನೀರುಣಿಸುವ ಈ ಯೋಜನೆಗೆ ಸುಮಾರು 140 ಕೋಟಿ ಅಂದಾಜಿದೆ ಎಂದಿದ್ದಾರೆ.
ಕುಂಠಿತ: 17 ಕಿಲೋ ಮೀಟರ್ ಉದ್ದದ ಗಾರ್ಲ್ಯಾಂಡ್ ಚಾನಲ್ ನಿರ್ಮಿಸುವ ಯೋಜನೆಗೆ 2009ರಲ್ಲೇ ಮಂಜೂರಾತಿ ದೊರೆತಿದೆ. ಆದರೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ದೊರಕದೆ ಹಾಗೂ ಅನುದಾನ ವಿಳಂಬದಿಂದ ಯೋಜನೆಯ ಅನುಷ್ಠಾನ ಕುಂಠಿತವಾಗಿದೆ. ಈ ಮಹತ್ವದ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿ ಉಪಕಾರ ಮಾಡಿದಲ್ಲಿ ಕಡೂರು ತಾಲೂಕಿನ ಜನತೆ ತಮ್ಮನ್ನು ಸ್ಮರಿಸಲಿದ್ದಾರೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭ ಕುರುಬ ಸಮಾಜದ ಮುಖಂಡರಾದ ಭಂಡಾರಿ ಶ್ರೀನಿವಾಸ್, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಂ. ಸತ್ಯನಾರಾಯಣ, ಗೋವಿಂದಪ್ಪ, ಪರಮೇಶ್, ತಿಮ್ಮಯ್ಯ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

