ಚಿಕ್ಕಮಗಳೂರು

ಹಾಜರಾತಿ ನಿಧಿ ಸೌಲಭ್ಯ ಬಾಲಕರಿಗೂ ವಿಸ್ತರಿಸಲು ಜಿಪಂ ಸದಸ್ಯ ಆಗ್ರಹ

Published On :

ತುರುವೇಕೆರೆ: ತಾಲೂಕಿನ ಮಣಿಚೆಂಡೂರಿನ ಶ್ರೀ ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಜಿಪಂ ಸದಸ್ಯ ಶ್ರೀನಿವಾಸ್ ಸೈಕಲ್ ವಿತರಣೆ ಮಾಡಿದರು.
ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಬಿಸಿಯೂಟ,ಸೈಕಲ್, ಈಗ ಒಂದನೇ ತರಗತಿಯ ಹೆಣ್ಣು ಮಕ್ಕಳ ಹಾಜರಾತಿ ಬೆಂಬಲಿಸಲು ದಿನಕ್ಕೆ 2 ನೀಡುವ ಯೋಜನೆಯನ್ನೂ ಜಾರಿಗೆ ತಂದಿದೆ. ಆದರೆ ಸರ್ಕಾರ ಈ ಯೋಜನೆಯನ್ನು ಬಾಲಕರಿಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯ ಶಿಕ್ಷಕ ಸಿ.ಬಿ.ಚಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಆರ್ಪಿ ಕೆ.ಎನ್.ಮಂಜಣ್ಣ, ಗ್ರಾಪಂ ಸದಸ್ಯ ಮುರುಳಿ ಮೋಹನ್, ಶಿಕ್ಷಕರಾದ ನಿರ್ವಾಣಮೂರ್ತಿ ಇದ್ದರು. ಶಿಕ್ಷಕ ನಟರಾಜು ಸ್ವಾಗತಿಸಿದರು, ರೂಪ ನಿರೂಪಿಸಿದರು. ಬಿ.ಕೃಷ್ಣ ವಂದಿಸಿದರು.
ಸೀಗೆಹಳ್ಳಿಯಲ್ಲೂ ವಿತರಣೆ: ತಾಲೂಕಿನ ಸೀಗೆಹಳ್ಳಿಯ ನೆಹರು ವಿದ್ಯಾಶಾಲೆ ವಿದ್ಯಾರ್ಥಿಗಳಿಗೆ ಜಿಪಂ ಸದಸ್ಯ ಶ್ರೀನಿವಾಸ್ ಉಚಿತ ಸೈಕಲ್ ವಿತರಣೆ ಮಾಡಿದರು. ಗ್ರಾಪಂ ಸದಸ್ಯ ಮುರುಳಿ ಮೋಹನ್, ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯ ಶಿಕ್ಷಕ ಟಿ.ಎಂ.ಬಸವಲಿಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.