ಚಿಕ್ಕಮಗಳೂರು

ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಬಿಡಿ

Published On :

ಕ.ಪ್ರ.ವಾರ್ತೆ, ಬೀರೂರು, ಜ.23 ಪ್ರತಿಯೊಬ್ಬ ಪೋಷಕರೂ ಸಹ ಖಾಸಗಿ ಶಾಲೆಗಳ ವ್ಯಾಮೋಹ, ಅವಾಂತರ ಹಾಗೂ  ಹಗಲು ದರೋಡೆಗಳಿಗೆ ಮಾರುಹೋಗದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವಂತಾಗಬೇಕು ಎಂದು ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಹೇಳಿದರು.
ಅವರು ಬೀರೂರಿನ ಶಿಕ್ಷಕರ ಭವನದಲ್ಲಿ ನಡೆದ ಬೀರೂರು ಶೈಕ್ಷಣಿಕ ವಲಯದ ಪ್ರಾಥಮಿಕ ಶಾಲೆಗಳ ಬ್ಲಾಕ್ ಮಟ್ಟದ ಕಲಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಸೌಲಭ್ಯ: ಸರ್ಕಾರ ಇಂದು ಶೈಕ್ಷಣಿಕ ಪ್ರಗತಿಗಾಗಿ ವಿವಿಧ ಸೌಕರ್ಯ ನೀಡುತ್ತಿದೆ.
 ಸರ್ಕಾರಿ ಶಾಲಛೆಗಳಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಇಂದು ದೇಶದ ಹಲವು ಉನ್ನತ ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ನಮಗೆ ಜೀವ ನದಿಯಿದ್ದಂತೆ ನಾವುಗಳು ಇದನ್ನರಿಯದೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಬಲಿಯಾಗಿ ನಿಂತ ನೀರಾಗುತ್ತಿದ್ದೇವೆ ಎಂದರು.
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ನಮ್ಮ ಸರ್ಕಾರಿ ಅಧಿಕಾರಿಗಳು ಹಾಗೂ ಶಿಕ್ಷಕರೂ ಕೂಡ ಹೆಚ್ಚಾಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿ, ಇಂತಹ ಪರಿಪಾಠ ತೊಲಗಿದಲ್ಲಿ ದೇಶದ ಅಭಿವೃದ್ಧಿ ಸಾದ್ಯ ಎಂದರು.
ಉತ್ತಮ ವೇದಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಾಂಸ್ಕೃತಿಕ ಪ್ರದರ್ಶನದ ವೇದಿಕೆ ಪ್ರತಿಭಾ ಕಾರಂಜಿಯಾದರೆ ಕಲಿಕೋತ್ಸವ ಮಕ್ಕಳ ಬುದ್ದಿಮತ್ತತೆಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಗಮ್ಯ ವೇದಿಕೆಯಾಗಿದೆ. ಮಕ್ಕಳು ವರ್ಷವೆಲ್ಲಾ ಕಲಿತ ಭೌತಿಕ ಶಕ್ತಿ ಹಾಗೂ ಜ್ಞಾನದ ಮಟ್ಟವನ್ನು ತಿಳಿಸುವುದೇ ಕಲಿಕೋತ್ಸವ ಎಂದರು.
ತಾಪಂ ಸದಸ್ಯೆ ಯಶೋಧಾ ಸಮಾರಂಭ ಉಧ್ಘಾಟಿಸಿದರು. ಪುರಸಭೆ ಸದಸ್ಯರಾದ ಗೀತಾ ಹೇಮಂತ್, ಪುಷ್ಪಲತಾ, ನಿರ್ಮಲಾ, ರಾಜಶೇಖರ್, ಸಾಶಿಇ ಉಪನಿರ್ದೇಶಕ ರಾಜಪ್ಪ ಬಿ.ಆರ್.ಸಿ. ಪ್ರಕಾಶ್, ಸುರೇಂದ್ರನಾಥ್, ಸಾಯಿದತ್ತ  ಕ್ಷೇಮಾಭಿವೃದ್ಧಿ ಸಂಘದ ಸತ್ಯನ್, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ದೇವರಾಜಪ್ಪ, ಕಾರ್ಯದರ್ಶಿ ಎಸ್.ಟಿ. ರಾಜಪ್ಪ, ತಾಲೂಕು ಸಂಘದ ಅಧ್ಯಕ್ಷ ರಾಜಶೇಖರ್, ತಿಪ್ಪೇಶ್, ನಾಗರತ್ನಮ್ಮ, ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.