ಚಿಕ್ಕಮಗಳೂರು

ಜೀವನದ ವಿಕಾಸಕ್ಕೆ ಅಧ್ಯಾತ್ಮ ಅಡಿಗಲ್ಲು: ರಂಭಾಪುರಿ ಶ್ರೀ

Published On :

ಅಜ್ಜಂಪುರ: ಜೀವನದ ವಿಕಾಸಕ್ಕೆ ಅಧ್ಯಾತ್ಮ ಅಡಿಗಲ್ಲು. ಸತ್ಯ, ಧರ್ಮ, ಶಾಂತಿ ಎಲ್ಲೆಡೆ ನೆಲೆಗೊಳ್ಳಬೇಕಾಗಿದೆ. ಪುಣ್ಯಕ್ಷೇತ್ರಗಳು ಜನ ಸಮುದಾಯದಲ್ಲಿ ಸಾಮರಸ್ಯ, ಸೌಹಾರ್ದತೆ ಕಾಪಾಡುವ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಬುಕ್ಕಾಂಬುಧಿ ಬೆಟ್ಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಿಂ. ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿಯವರ 78ನೇ ವರ್ಷದ ಸಂಸ್ಮರಣೋತ್ಸವ ಪ್ರಯುಕ್ತ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಜ್ಜಯಿನಿ ಸಿದ್ಧಲಿಂಗ ಶ್ರೀಗಳು ಒಂದು ವ್ಯಕ್ತಿಯಲ್ಲ, ಮಹಾನ್ ಶಕ್ತಿಯಾಗಿದ್ದರು. ಎಲ್ಲ ವರ್ಗದ, ಎಲ್ಲ ಸಮುದಾಯದವರಿಗೆ ಅವರು ಕೊಟ್ಟ ಸಂದೇಶ ಸ್ಮರಣೀಯ. ಭಕ್ತಿಗೆ ಅವರು ಹೆಸರುವಾಸಿಯಾಗಿದ್ದರು ಎಂದರು.
ಸಮಾರಂಭ ಉದ್ಘಾಟಿಸಿ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಜ್ಞಾನ, ಅಶಿಸ್ತು ಪ್ರಗತಿಗೆ ಅಡ್ಡಿಯಾಗಿದೆ. ಯೋಗ್ಯ ಗುರುವಿನ ಮಾರ್ಗದರ್ಶನ ಇದ್ದರೆ ಬಾಳು ಸಾರ್ಥಕವಾಗುತ್ತದೆ. ಉಜ್ಜಯಿಸಿ ಸಿದ್ಧಲಿಂಗ ಸ್ವಾಮೀಜಿಯವರ ಆದರ್ಶ ಎಲ್ಲರಿಗೂ ದಾರಿದೀಪ ಎಂದರು.
ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಅಶಾಂತಿಯಿಂದ ಬದುಕುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಪರಿಪಾಲನೆಯೊಂದೆ ದಾರಿ. ದೇಶಪ್ರೇಮ, ಮತ್ತು ಧರ್ಮನಿಷ್ಠೆ ಎಲ್ಲರಲ್ಲೂ ಬೆಳೆಯಲಿ ಎಂದು ಆಶಿಸಿದರು.
ನಂದಿಪುರದ ನಂದೀಶ್ವರ ಸ್ವಾಮೀಜಿ, ಮಳಲಿಮಠದ ನಾಗಭೂಷಣ ಶಿವಾಚಾರ್ಯರು, ಡಾ. ಯತೀಶ್ವರ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಹಲವರು ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿಗೆ ನುಡಿನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.