ಚಿಕ್ಕಮಗಳೂರು

ನಾಳೆ ಅರೇಕಲ್ಲಮ್ಮದೇವಿ ಜಾತ್ರೋತ್ಸವ

Published On :

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಕಡೂರು ತಾಲೂಕಿನ ತಮ್ಮ ಸ್ವಗ್ರಾಮ ಯಗಟಿಯಲ್ಲಿ ಜ.25ರಂದು ಗ್ರಾಮ ದೇವತೆ ಅರೇಕಲ್ಲಮ್ಮದೇವಿ ಜಾತ್ರೆ, ಗದುಗಿನ ವೀರನಾರಾಯಣಸ್ವಾಮಿ ದೇವಾಲಯದಲ್ಲಿ ಕುಮಾರವ್ಯಾಸ ಜಯಂತಿ ಆಚರಿಸುವ ಕುರಿತು ಗ್ರಾಮದ ಗೌಡರು ಬುದ್ಧಿವಂತರೊಂದಿಗೆ ಚರ್ಚಿಸಿದರು.
ಅರೇಕಲ್ಲಮ್ಮನವರ ಸನ್ನಿಧಾನದಲ್ಲಿ ಗ್ರಾಮದ 9 ದೊಡ್ಡಿ ಗೌಡರು ಮತ್ತು ಊರಿನ ಪ್ರಮುಖರೊಂದಿಗೆ ಮಾತನಾಡಿ ಶಾಸಕರು, ಈ ವರ್ಷವೂ ದೇವಿ ಜಾತ್ರೆ, ಕುಮಾರವ್ಯಾಸ ಜಯಂತಿ ಅಂಗವಾಗಿ ಗ್ರಾಮೀಣ ಸೊಗಡು ಉಳಿಸುವ ನಿಟ್ಟಿನಲ್ಲಿ ನಾಡಿನ ಸಂಸ್ಕೃತಿ, ಕಲೆ, ಧಾರ್ಮಿಕ ಚಿಂತಕರು, ವಿಚಾರವಾದಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಕುಮಾರವ್ಯಾಸ ಜಯಂತಿ ಅಂಗವಾಗಿ ಜ.25ರಂದು ಶನಿವಾರ ಕವಿ ಕೃತಿ ನಮನ ನಾಡಿನ ಪ್ರಸಿದ್ಧ ಗಮಕಿಗಳಾದ ಸುಜಾತ ಗೋಪಿನಾಥ್ ಅವರಿಂದ ವಾಚನ ಮತ್ತು ಉಪನ್ಯಾಸಕ ಎಂ.ಎಸ್. ವಿನಾಯಕ ಅವರಿಂದ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪದ್ಮಜಾ ಶೇಷಗಿರಿರಾವ್ ವಾಚನ ಮಾಡಲಿದ್ದು, ವ್ಯಾಖ್ಯಾನವನ್ನು ಕುಮಾರವ್ಯಾಸನ ವಂಶಜರಾದ ಹಾಗೂ ಶಾಸಕ ವೈ.ಎಸ್.ವಿ.ದತ್ತ ವ್ಯಾಖಾನಿಸಲಿದ್ದಾರೆ ಎಂದರು.
ಅದೇ ದಿನ ಸಂಜೆ 6.30 ಗಂಟೆಗೆ ಡಾ. ಸಿದ್ದಲಿಂಗಯ್ಯ ಅವರು ರಚಿಸಿದ 'ಏಕಲವ್ಯ' ಎಂಬ ಪೌರಾಣಿಕ ನಾಟಕ ಪ್ರದರ್ಶನ ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ 'ಬೆಪ್ಪು ತಕ್ಕಡಿ ಬೋಳೇ ಶಂಕರ' ನಾಟಕವನ್ನು ಬೆಂಗಳೂರಿನ ಪ್ರಸಿದ್ಧ ನಂದನ ಸಂಸ್ಥೆಯ ನಿರ್ವಾಹಕ ನಿರ್ದೇಶಕ ದೇವನಾಗೇಶ್ ಅವರ ನಿರ್ದೇಶನದಲ್ಲಿ ಏರ್ಪಡಿಸಲಾಗಿದೆ. ಜ.28ರಂದು ಅರೇಕಲ್ಲಮ್ಮನವರ ಬಾನ ನಡೆಯಲಿದೆ. ಜ.30ರಂದು ಸಿಡಿ ಉತ್ಸವ ಮತ್ತು ಫೆ.1 ರಂದು ಅಮ್ಮನವರ ರಥೋತ್ಸವ ನಡೆಯಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.