ಚಿಕ್ಕಮಗಳೂರು

4ನೇ ಬಾರಿ ಗ್ರಾಪಂ ಅಧ್ಯಕ್ಷರಾಗಿ ರಾಜಾನಾಯ್ಕ

Published On :

ಕ.ಪ್ರ.ವಾರ್ತೆ, ಕಡೂರು, ಜ.27
ತಾಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಪಂಚಾಯ್ತಿ ವ್ಯಾಪ್ತಿಯ ಎಂ.ಕೋಡೀಹಳ್ಳಿಯ ರಾಜಾನಾಯ್ಕ ಸತತ 4ನೇ ಬಾರಿಗೆ ಅವಿರೋಧ ಆಯ್ಕೆಯಾಗಿದ್ದಾರೆ.
ಎಂ.ಕೋಡೀಹಳ್ಳಿ, ತುರವನಹಳ್ಳಿ, ಮಲ್ಲೇಶ್ವರ, ಮಚ್ಚೇರಿ, ಚೌಡ್ಲಾಪುರ ವ್ಯಾಪ್ತಿ ಹೊಂದಿರುವ ಪಂಚಾಯ್ತಿಯಲ್ಲಿ 9 ಸದಸ್ಯ ಬಲವಿದ್ದು, ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ರಾಜಾನಾಯ್ಕ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ತಿಮ್ಮಾಭೋವಿ ಘೋಷಿಸಿದರು.
ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷ ರಾಜಾನಾಯ್ಕ ಮಾತನಾಡಿ, ಈ ಪಂಚಾಯ್ತಿಯ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ಮತ್ತು ಶುದ್ಧಗಂಗಾ ಘಟಕವನ್ನು ಮಲ್ಲೇಶ್ವರಕ್ಕೆ ತರಬೇಕಿದೆ. ಈ ಆಶಯಕ್ಕೆ ಎಲ್ಲ ಸದಸ್ಯರೂ ಒಪ್ಪಿಗೆ ನೀಡಿದ್ದಾರೆ. ಅದನ್ನು ಸಹ ಸದಸ್ಯರ ಸಹಕಾರದಿಂದ ಸಾಕಾರಗೊಳಿಸುತ್ತೇನೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರತಾ.ಪಂ. ಮಾಜಿ ಅಧ್ಯಕ್ಷ ಓಂಕಾರಪ್ಪ, ಜಿಪಂ ಸದಸ್ಯೆ ಮಾಲಿನಿಬಾಯಿ ರಾಜಾನಾಯ್ಕ, ಉಪಾಧ್ಯಕ್ಷ ಗಂಗಮ್ಮ,ಪಿಡಿಒ ಜಯಪ್ಪ, ಸದಸ್ಯರಾದ ಸಿದ್ರಾಮಪ್ಪ, ಮೀನಾಕ್ಷಿ, ಭಾಗ್ಯಮ್ಮ, ಲಲಿತಮ್ಮ, ಲಕ್ಷ್ಮೀ, ಕಲ್ಲೇಶಪ್ಪ, ಗೋವಿಂದಪ್ಪ, ಮುಖಂಡರಾದ ಧರ್ಮಣ್ಣ, ಜಗದೀಶ್, ಮಂಜು, ಬಂಕ್ ಮಂಜು, ಲತಾ, ಮಹೇಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.