ಜಾಗ ನಾಪತ್ತೆ: ಲೋಕಾಯುಕ್ತರಿಗೆ ದೂರು
ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಬಾಳೆಹೊನ್ನೂರಿನ ಸರ್ವೇ ನಂ. 213ರಲ್ಲಿ ಕಂದಾಯ ಇಲಾಖೆ ನೌಕರರಿಗೆ ಮೀಸಲಾದ 4 ಎಕರೆ ಜಾಗ ಕಳೆದು ಹೋಗಿರುವ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನಾಗಿ ಪರಿವರ್ತಿಸಿ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ತಾ. ಬಿಜೆಪಿ ವಕ್ತಾರ ಬಿ. ಜಗದೀಶ್ಚಂದ್ರ ಹಾಗೂ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಯು. ಆಶ್ರಫ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಲೋಕಾಯುಕ್ತರು ಹದಿನೈದು ದಿನದೊಳಗೆ ತನಿಖೆ ನಡೆಸಿ ವರದಿ ನೀಡಬೇಕೆಂದು ನರಸಿಂಹರಾಜಪುರ ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಲಿಖಿತವಾಗಿ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಆರೋಪವನ್ನು ಸುಳ್ಳು ಎಂದು ವಾದಿಸಿದ್ದ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರುಗಳಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಸರ್ವೇ ನಂ. 213 ರಲ್ಲಿ ಕಳೆದು ಹೋದ ಕಂದಾಯ ಇಲಾಖೆಯ ಜಾಗವನ್ನು ಹುಡುಕಿ ಪುನ: ಕಂದಾಯ ಇಲಾಖೆಯ ಸುಪರ್ದಿಗೆ ನೀಡಿಸಬೇಕು. ಗ್ರಾಪಂ ನವರು ಕೇವಲ ಅಂಗಡಿ ಮಳಿಗೆಗಳ ವಿಚಾರ ಮುಂದಿಟ್ಟುಕೊಂಡು ಉಳಿದ ವಿಚಾರಗಳನ್ನು ಮರೆಮಾಚುವ ಯತ್ನ ನಡೆಸಿದ್ದು ಇದು ಲೋಕಾಯುಕ್ತ ತನಿಖೆಯ ಮುಂದೆ ನಡೆಯುವುದಿಲ್ಲ ಎಂದಿದ್ದಾರೆ.
ಅಂಗಡಿ ಮಳಿಗೆಗಳ ವಿಚಾರದಲ್ಲಿ ಬಿಜೆಪಿ ನಿರ್ಧಾರ ಸ್ಪಷ್ಟವಾಗಿದ್ದು, ಯಾವುದೇ ಮಳಿಗೆದಾರರು ಆತಂಕ ಪಡುವ ಅಗತ್ಯವಿಲ್ಲ. ಕಳೆದ ಹಲವಾರು ವರ್ಷಗಳಿಂದ ಅಂಗಡಿ ನಡೆಸುತ್ತಿರುವವರಿಗೆ ಅಂಗಡಿ ನೀಡಬೇಕೆನ್ನುವುದು ಬಿಜೆಪಿ ನಿರ್ಧಾರವಾಗಿದ್ದು, ಮಳಿಗೆಗಳಲ್ಲಿ ಒಳಬಾಡಿಗೆ ಒಪ್ಪಂದಗಳನ್ನು ವಿರೋಧಿಸಲಾಗುತ್ತದೆ.
ಅದಲ್ಲದೇ ಸರ್ವೆ ನಂ. 213 ರಲ್ಲಿ ಈಗಾಗಲೇ ನಿವೇಶನ ಪಡೆದು ಮೋಸ ಹೋಗಿರುವ ವ್ಯಕ್ತಿಗಳಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುವುದಾದರೆ ಬಿಜೆಪಿ ಅದಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

