ವ್ಯಕ್ತಿ ಅಪಹರಣ: ಅಪ್ಪ, ಮಕ್ಕಳ ಬಂಧನ
ಜಯಪುರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಅಪಹರಿಸಿದ್ದ ತಂದೆ ಸೇರಿದಂತೆ ನಾಲ್ವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ರಫೀಕ್ ಆಹಮದ್, ರಜ್ವೀನ್, ರಜ್ಮನ್, ರಾಜ್ನಿನ್ ಬಂಧಿತರು.
ಅಪಹರಣಕ್ಕೆ ಒಳಗಾದ ಇರ್ಫಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೂರು ದಿನಗಳ ಹಿಂದೆ ಇರ್ಫಾನ್ ಹಾಗೂ ರಫೀಕ್ ಅಹಮದ್ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಇರ್ಫಾನ್ ಅವರು ರಫೀಕ್ ಅಹಮದ್ಗೆ ಹೊಡೆದಿದ್ದರು. ಈ ದ್ವೇಷದಿಂದಾಗಿ ರಫೀಕ್ ಅಹಮದ್ ಹಾಗೂ ಅವರ ಮಕ್ಕಳಾದ ರಜ್ವೀನ್, ರಜ್ಮನ್ ಹಾಗೂ ರಾಜ್ನಿನ್ ಅವರು ಮಂಗಳವಾರ ಬೆಳಿಗ್ಗೆ ಇರ್ಫಾನ್ನನ್ನು ಅಡ್ಡಗಟ್ಟಿ ಅತನನ್ನು ಶೃಂಗೇರಿಯಿಂದ ಕಾರಿನಲ್ಲಿ ಅಪಹರಿಸಿ ಜಯಪುರ ಮಾರ್ಗದಲ್ಲಿ ಹೋಗಿದ್ದರು. ಈ ವಿಷಯ ಶೃಂಗೇರಿ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ದಟ್ಟವಾಗಿ ಹರಡಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜಯಪುರ ಠಾಣೆಗೆ ಮಾಹಿತಿ ನೀಡಿದರು. ಜಯಪುರ ಠಾಣೆ ಸಬ್ ಇನ್ಸ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸರು ಶೃಂಗೇರಿ ಕಡೆಯಿಂದ ಬಂದ ಕಾರನ್ನು ಜಯಪುರದ ಸ್ವಾಗತ್ ಆಟೋ ಸರ್ಕಲ್ ಬಳಿ ತಡೆದು, ತಪಾಸಣೆ ನಡೆಸಿದಾಗ ಅಪಹರಣಕಾರರು ಸಿಕ್ಕಿ ಬಿದ್ದಿದ್ದಾರೆ. ಶೃಂಗೇರಿ ಸರ್ಕಲ್ ಇನ್ಸ್ಪೆಕ್ಟರ್ ಸುಧೀರ್ ಹೆಗಡೆ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

