ಚಿಕ್ಕಮಗಳೂರು

ಹಣ ನೀಡದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನು ವಿರುದ್ಧ ದೂರು

Published On :

ಮೂಡಿಗೆರೆ: ಲೋಕಸಬಾ ಚುನಾವಣೆ ಮುಗಿದು 2 ತಿಂಗಳು ಕಳೆದರೂ ಚುನಾವಣೆಗೆ ಬಳಸಿದ ಧ್ವನಿವರ್ಧಕ, ಸ್ಟೇಜ್, ಜನರೇಟರ್ ಇತ್ಯಾದಿ ಬಾಬ್ತು ಹಣ ನೀಡದೇ ಆಯೋಗಕ್ಕೆ ಹಣ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು ದಿಲ್ಷನ್ ಸೌಂಡ್ ಅಂಡ್ ಡೆಕೋರೇಟರ್ ಮಾಲೀಕ ಡ್ಯಾನಿ ಕಿಶೋರ್ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಲಿಖಿತ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2014 ರ ಮೇ 9 ರಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಟ್ಟಣದ ಹೊಯ್ಸಳಾ ಕ್ರೀಡಾಂಗಣಕ್ಕೆ ಆಗಮಿಸಿದಾಗ ತಮ್ಮಿಂದ ಧ್ವನಿವರ್ಧಕ, ಸ್ಟೇಜ್‌ಸೆಟ್, ಜನರೇಟರ್‌ಗಳನ್ನು ಬಾಡಿಗೆ ಪಡೆದು ಅದರ ಬಾಬ್ತು ರು. 36,500 ಗಳಾಗಿದ್ದು ಕಾರ್ಯಕ್ರಮ ಮುಗಿದ ನಂತರ ನಾಳೆ ಬೆಳಿಗ್ಗೆ ನಿಮಗೆ ಹಣ ತಲುಪಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ಮನು ತಿಳಿಸಿದ್ದರು.
ಉಡಾಫೆ ಉತ್ತರ:  ಆದರೆ, ಎರಡು ದಿನ ಕಳೆದರೂ ಹಣ ಪಾವತಿಯಾಗದ ಕಾರಣ ಅವರನ್ನು ಕೇಳಲು ಹೋದಾಗ ಹಣ ಕೊಡಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿ, ಮಾನಸಿಕವಾಗಿ ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಲೋಕಸಭಾ ಚುನಾವಣೆ ವೆಚ್ಚದಲ್ಲಿ ರು. 36,500 ಗಳನ್ನು ತೋರಿಸಿದ್ದು, ಆದರೆ ಇದುವರೆಗೂ ತಮಗೆ ಹಣ ಸಂದಾಯವಾಗಿಲ್ಲ. ಆದರೂ ಸುಳ್ಳು ಲೆಕ್ಕ ತೋರಿಸಿ ಚುನಾವಣಾಧಿಕಾರಿಗಳನ್ನು ವಂಚಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನು ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ತಮಗೊಬ್ಬರಿಗೇ ಅಲ್ಲ, ವಾಹನ ಚಾಲಕರಿಗೂ ಹಣ ಸಂದಾಯ ಮಾಡದೇ ರಾಘವೇಂದ್ರ ಎಂಬುವವರಿಗೆ ಟೆಂಟಿನ ಬಾಬ್ತು ರು. 1.50 ಲಕ್ಷ ವಂಚಿಸಿದ್ದಾರೆ. ರಾಘವೇಂದ್ರ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಹಣ ನೀಡದೇ ವಂಚಿಸುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಎಂ.ಪಿ.ಮನು ಅವರನ್ನು ಪದಚ್ಯುತಿಗೊಳಿಸುವಂತೆ ಮತ್ತು ತಮ್ಮ ಬಾಬ್ತು ಹಣವನ್ನು ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಅಲ್ಲದೇ ಈ ಕುರಿತು 15 ದಿನಗಳ ಗಡುವು ನೀಡಿದ್ದು ತಪ್ಪಿದಲ್ಲಿ ಕುಟುಂಬ ಸಮೇತ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.