ಅಜ್ಜಂಪುರ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ
ತರೀಕೆರೆ: ಸಮೀಪದ ಅಜ್ಜಂಪುರ ಗ್ರಾಪಂ ಅಧ್ಯಕ್ಷರಾಗಿ ಆರ್. ಕೃಷ್ಣಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಗ್ರಾಪಂ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್. ತಿಪ್ಪೇರುದ್ರಯ್ಯ, ಮಾಜಿ ಪುರಸಭಾಧ್ಯಕ್ಷರಾದ ಏಕೋರಾಮಸ್ವಾಮಿ, ಗುರುಶಾಂತಪ್ಪ, ಎಂ.ಎನ್. ಜನಾರ್ದನರಾವ್ ಗ್ರಾಪಂ ಸದಸ್ಯರಾದ ಎ.ಸಿ.ಚಂದ್ರಪ್ಪ, ಜಿ. ನಟರಾಜ್, ಜೋಗಿ ಎನ್. ಪ್ರಕಾಶ್, ನಾಗರತ್ನಮ್ಮ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಗ್ರಾಪಂ ಸದಸ್ಯ ಎಸ್. ಶಿವಾನಂದ್ ನಿರೂಪಿಸಿದರು.
ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ
ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯ ಮಾವಿನಕೆರೆ ಗ್ರಾಮದ ಸಾಲಿನಮಕ್ಕಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಣ್ಣು ಎಂಬಾತನನ್ನು ಬಂಧಿಸಿರುವ ಕಳಸ ಠಾಣೆ ಪೊಲೀಸರು 980 ಮೌಲ್ಯದ ಮದ್ಯ ವಶ ಪಡಿಸಿಕೊಂಡಿದ್ದಾರೆ.
ತನ್ನ ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೂಡಿಗೆರೆಯಲ್ಲಿ ಸಂಭ್ರಮದ ಭೀಮನ ಅಮಾವಾಸ್ಯೆ
ಮೂಡಿಗೆರೆ: ಆಷಾಢ ಮಾಸ ಮುಗಿದ ನಂತರ ಬರುವ ಮೊದಲ ಹಬ್ಬವೇ ಭೀಮನ ಅಮಾವಾಸ್ಯೆ. ಮಲೆನಾಡು ಬಾಗದಲ್ಲಿ ಭೀಮನ ಅಮಾವಾಸ್ಯೆಯನ್ನು ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದರ ಮೂಲಕ ಮನೆಯಲ್ಲಿ ಸಿಹಿಯನ್ನು ತಯಾರಿಸಿ ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಪದ್ಧತಿಯಂತೆ ಸಣ್ಣಮಕ್ಕಳ ಕೈಯಲ್ಲಿ ಮೈದಾಹಿಟ್ಟಿನಿಂದ ಮಾಡಿದ ಗದೆಯನ್ನು ಹಿಡಿದು ಭಂಡಾರ ಒಡೆಯುವುದರ ಮೂಲಕ ಭೀಮನ ಅಮಾವಾಸ್ಯೆಗೆ ವಿಶೇಷ ಮೆರಗು ತಂದಿತು.
ಮಿನಿ ವಿಧಾನಸೌಧ ಕಟ್ಟಡ ದುರಸ್ತಿಗೆ ನಿರ್ಧಾರ
ಮೂಡಿಗೆರೆ: 'ಸೋರುತ್ತಿರುವ ಮಿನಿ ವಿಧಾನ ಸೌಧ - ಕಚೇರಿ ಸ್ಥಳಾಂತರಕ್ಕೆ ನಿರ್ಧಾರ' ಎಂಬ ಶೀಷಿಕೆ ಅಡಿ ಜುಲೈ 26ರ ಕನ್ನಡಪ್ರಭದಲ್ಲಿ ಸಚಿತ್ರ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಟ್ಟಡ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಶಾರದಾಂಬ ಕರೆದಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೂರ್ಯಕಾಂತ್ ಅವರನ್ನು ಉದ್ದೇಶಿಸಿ ಮಾತನಾಡಿ, ಕಳೆದ 3 ವರ್ಷಗಳಿಂದ ವಿಧಾನ ಸೌಧದಲ್ಲಿ ಮಳೆ ಸೋರಿಕೆಯಾಗುತ್ತಿರುವ ವಿಚಾರ ಚಿತ್ರ ಸಹಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದರೂ ಯಾವುದೇ ಕ್ರಮ ಜರುಗಿಸದೇ ಇರುವ ಇಲಾಖೆ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಕಟ್ಟಡ ದುರಸ್ತಿಪಡಿಸಲು ಸಾಧ್ಯವಿಲ್ಲ ಎಂದು ಪತ್ರ ಬರೆದುಕೊಡಿ, ನಾನು ಮುಂದಿನ ಕ್ರಮ ಜರುಗಿಸುತ್ತೇನೆ. ಇಲ್ಲವಾದಲ್ಲಿ ಸಿಬ್ಬಂದಿ ತಿಳಿಸಿದಂತೆ ಮಳೆಗಾಲ ಕಳೆಯುವವರೆಗೂ ನಮ್ಮ ಕಚೇರಿಯನ್ನು ನಿಮ್ಮ ಇಲಾಖೆಗೆ ವರ್ಗಾಯಿಸ ಬೇಕಾಗುತ್ತದೆ ಎಂದು ನುಡಿದರು.
ಆಗ ಇಲಾಖೆಯ ಅಧಿಕಾರಿ ಸೂರ್ಯಕಾಂತ್, ತಾವು ಹೊಸದಾಗಿ ಮೂಡಿಗೆರೆ ಇಲಾಖೆಗೆ ವರ್ಗಾವಣೆಯಾಗಿ ಬಂದಿದ್ದು, ಅಗಸ್ಟ್ನಲ್ಲಿ ಸಭೆ ನಡೆಯಲಿದ್ದು, ಕಾಮಗಾರಿ ಬಗ್ಗೆ ಚರ್ಚಿಸಿ ದುರಸ್ತಿ ನಡೆಸುವುದಾಗಿ ತಿಳಿಸಿದರು. ರಾಜಸ್ವ ನಿರೀಕ್ಷಕ ಎಂ.ಗಂಗಾಧರ್, ತಾಪಂ ಕಾರ್ಯನಿರ್ವಾಹಕ ಚಂದ್ರಮೌಳಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

