ಸಮರ್ಪಕವಾಗಿ ಕುಡಿವ ನೀರೊದಗಿಸಿ
ಕಡೂರು: ಅಂಗನವಾಡಿಗಳಿಗೆ ಕಳಪೆ ಕಡಲೆ ಬೀಜ ಪೂರೈಕೆ, ದಾಸ್ತಾನಿದ್ದ ಮೇವು ಜನಪ್ರತಿಧಿಗಳ ಗಮನಕ್ಕೆ ತಾರದೆ ಚಿತ್ರದುರ್ಗಕ್ಕೆ ಸರಬರಾಜು, ನೀರಿನ ಗಂಭೀರ ಸಮಸ್ಯೆ ಇರುವೆಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು..
ಇದು ಕಡೂರು ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ವೈ.ಕೆ. ಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳಿ ಬಂದ ಮಾತುಗಳು.
ಸದಸ್ಯ ಆರ್. ಶಿವಕುಮಾರ್ ಮಾತನಾಡಿ, ಗೆದ್ಲೆಹಳ್ಳಿ ಭೋವಿ ಕಾಲೋನಿ ಸೇರಿದಂತೆ ತಂಗಲಿ ತಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಬಗ್ಗೆ ಹಲವು ಬಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರೂ ಕ್ರಮ ಕೈಗೊಂಡಿಲ್ಲ ಎಂದರು.
ಒಟ್ಟಾಗಿ ಕಾರ್ಯ ನಿರ್ವಹಿಸಿ: ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಅರಿತು ಸಂಬಂಧಿಸಿದ ಪಿಡಿಒ ಮೂಲಕ ಸಮಸ್ಯೆಗೆ ಕಾರಣ ಕಂಡುಕೊಂಡು ಜಿಪಂ ಎಂಜಿನಿಯರ್ಗಳ ಸಲಹೆ ಪಡೆದು ನೀರು ನೀಡಬೇಕು. ಒಂದು ವೇಳೆ ಸಮರ್ಪಕ ನೀರು ದೊರಕದೇ ಇದ್ದಲ್ಲಿ ಟ್ಯಾಂಕರ್ ಮೂಲಕ ನೀಡಬೇಕು.ಇದಕ್ಕೆ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ 8 ಗಂಟೆಯೊಳಗೆ ನೀರು ಒದಗಿಸಬೇಕು ಎಂದು ಸೂಚಿಸಿದರು.
ಪಶು ಸಂಗೋಪನಾ ಇಲಾಖೆ ಕಾರ್ಯವೈಖರಿ ಬಗ್ಗೆ ಸದಸ್ಯ ಜಿ.ಪಿ. ಪ್ರಭುಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ತಾಲೂಕಿನಾದ್ಯಂತ ಬರಗಾಲದ ಛಾಯೆ ಮೂಡುತ್ತಿದ್ದು, ಮೇವಿನ ಸಂಗ್ರಹಣೆ ನಡೆಯಬೇಕು ಎಂದಾಗ, ಪಂಚನಹಳ್ಳಿ, ಚೌಳಹಿರಿಯೂರು ಮತ್ತು ದೇವನೂರುಗಳಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಯಾರನ್ನು ಕೇಳಿ ಆ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಸದಸ್ಯರು ಕೇಳಿದಾಗ ಅಧ್ಯಕ್ಷ ಬಸಪ್ಪ ಮೇವಿನ ಕೊರತೆ ಬಾರದಂತೆ ಸಂಗ್ರಹಿಸುವಂತೆ ಸೂಚಿಸಿದಾಗ ನಮ್ಮಲ್ಲಿದ್ದ 160 ಟನ್ ಮೇವನ್ನು ಚಿತ್ರದುರ್ಗಕ್ಕೆ ಕಳುಹಿಸಿರುವುದನ್ನು ಸದಸ್ಯರು ಖಂಡಿಸಿ, ಅಧಿಕಾರಿ ವರ್ತನೆ ವಿರುದ್ದ ಕಿಡಿಕಾರಿದರು.
ಸದಸ್ಯೆ ಮಲಿಗಮ್ಮ ಮಾತನಾಡಿ, ಅಂಗನವಾಡಿಗಳಲ್ಲಿ ನೀಡುತ್ತಿರುವ ಕಡಲೆಕಾಯಿ ಬೀಜ ಕಳೆಪೆ ಮಟ್ಟದ್ದು. ಮಕ್ಕಳು ಇದನ್ನು ತಿಂದರೆ ಕಾಯಿಲೆ ಬರುತ್ತದೆ ಎಂದು ಆರೋಪಿಸಿದಾಗ ಕೆಲವೊಂದು ಭಾಗಗಳಲ್ಲಿ ಸಮಸ್ಯೆಯಿದ್ದು, ವಾಪಸ್ ಪಡೆದು ಗುಣಮಟ್ಟದ ಪದಾರ್ಥ ನೀಡಿದ್ದೇವೆ ಎಂದು ರಂಗನಾಥ್ ಉತ್ತರಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಎ.ಇ. ರತ್ನ, ಆರ್. ಶಿವಕುಮಾರ್, ಬಸವರಾಜಪ್ಪ, ನೀಲಂಕಠಪ್ಪ ಮೊದಲಾದವರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

