ಚಿಕ್ಕಮಗಳೂರು

ಮಹಾಲಕ್ಷ್ಮಿ ದೇಗುಲ ಸಮಿತಿಗೆ ಆಯ್ಕೆ

Published On :

ಕಡೂರು: ತಾಲೂಕಿನ ಕೆರೆಸಂತೆಯ ಇತಿಹಾಸ ಪ್ರಸಿದ್ಧ ಶ್ರೀಮಹಾಲಕ್ಷ್ಮಿ ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಕಡೂರಿನ ಕರಿಬಡ್ಡೆ ಶ್ರೀನಿವಾಸ್ ಮತ್ತು ಉಪಾಧ್ಯಕ್ಷರಾಗಿ ಚಿಕ್ಕಮಗಳೂರಿನ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವಾಲಯದ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷ ನಾಗರಾಜು, ಶಿವಮೊಗ್ಗದ ನಾರಾಯಣಸ್ವಾಮಿ, ತರೀಕೆರೆಯ ರೇವಣ್ಣ, ಗೋವಿಂದಪ್ಪ, ನಟರಾಜ್, ವಾಣಿ ಹಾಲಪ್ಪ, ಶ್ರೀನಿವಾಸಮೂರ್ತಿ, ಚಂದ್ರಪ್ಪ ನೂತನ ಸದಸ್ಯರಾಗಿ ಆಯ್ಕೆಯಾದರು. ಹಾಲಪ್ಪ, ಅರ್ಚಕ ನಂಜುಂಡಸ್ವಾಮಿ ಸೇರಿದಂತೆ ಹಲವಾರು ಊರುಗಳಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕರಿಬಡ್ಡೆ ಶ್ರೀನಿವಾಸ್ ಮಾತನಾಡಿ, ದೇವಾಲಯ ಸಮಿತಿ ಅಧ್ಯಕ್ಷನಾಗಿ ಆಯ್ಕೆ ಆಗಿರುವುದು ನನ್ನ ಪುಣ್ಯ. ಇತ್ತೀಚಿನ ದಿನಗಳಲ್ಲಿ ದೇವಾಲಯವು ಶಿಥಿಲಾವಸ್ಥೆಯಿಂದ ಕೂಡಿದೆ. ಈ ಹಿಂದೆ ಈ ದೇವಾಲಯದ ಅಭಿವೃದ್ಧಿಗೆ ದುಡಿದ ಎಲ್ಲರ ಸೇವೆಯನ್ನು ಸ್ಮರಿಸುತ್ತೇನೆ ಎಂದರು.
ಹಂತ ಹಂತವಾಗಿ ಅಭಿವೃದ್ಧಿ:  ಕ್ರಿ.ಶ. 1117 ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿ ರಾಣಿ ಶಾಂತಲೆಯು ಕೆರೆಸಂತೆಯಲ್ಲಿ ಪ್ರತಿಷ್ಠಾಪಿಸಿದ ಮೂರೂವರೆ ಅಡಿ ಎತ್ತರದ ಅತ್ಯಂತ ಸುಂದರವಾದ ಮಹಾಲಕ್ಷೀ ವಿಗ್ರಹವು ಗಜಪೀಠದ ಮೇಲೆ ನಯನ ಮನೋಹರ ಭಂಗಿಯಲ್ಲಿ ಕುಳಿತು ಶಂಕು ಚಕ್ರ ಗಧಾ ಅಮೃತ ಶಿಲೆಯ ಕಲಶ ಹಿಡಿದಿರುವ ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದೆ.
ದೇವಾಲಯದ ಸಮೀಪವೇ ವಿಷ್ಣುಸಮುದ್ರ ಕೆರೆ ಕೂಡ ಇದೆ. ಈ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬಹುದಾಗಿದೆ.
ಆದ್ದರಿಂದ ದೇವಾಲಯದ ಸಮುಚ್ಚಯವನ್ನು ಭಕ್ತರು, ಸರ್ಕಾರ ಮತ್ತು ದೇವಾಲಯದ ಸಮಿತಿಯ ಎಲ್ಲ ಪದಾಧಿಕಾರಿಗಳ ಸಹಯೋಗದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.