ಚಿಕ್ಕಮಗಳೂರು

ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಜಾನುವಾರು ಹರಾಜು

Published On :

ಬೀರೂರು: ಪಟ್ಟಣದ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಬುಧವಾರ ಈ ತಳಿಯ ರಾಸುಗಳ ಹರಾಜು ಪ್ರಕ್ರಿಯೆ ನಡೆಯಿತು.
ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದಿಂದ ಆಗಮಿಸಿದ ನೂರಾರು ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಿನಿಂದ ಆರಂಭವಾದ ಈ ಹರಾಜು ಪ್ರಕ್ರಿಯೆಯಲ್ಲಿ ಅಜ್ಜಂಪುರ ಲಿಂಗದಹಳ್ಳಿ ಬಾಸೂರು ಚಿಕ್ಕಎಮ್ಮಿಗನೂರು ರಾಮಗಿರಿ ಹಬ್ಬನಘಟ್ಟ, ಈ ಆರು ಅಮೃತಮಹಲ್ ಕೇಂದ್ರಗಳಿಂದ ಇಲ್ಲಿಗೆ ಆಗಮಿಸಿದ್ದ ನೂರಾರು ರಾಸುಗಳನ್ನು ಕ್ರಮವಾಗಿ ವಿಂಗಡಿಸುವುದರ ಮೂಲಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಜ್ಜಂಪುರ ಸಂವರ್ಧನಾ ಕೇಂದ್ರದಿಂದ ಬಂದಿದ್ದ ಎ-12,5 ಪಾತ್ರೆ ಹಾಗೂ ಎ-12,6 ಕೆಂಪಲಕ್ಕಿ ಎಂಬ ಜೋಡಿ ಎತ್ತು ಅತ್ಯಂತ ಹೆಚ್ಚಿನ 1.11 ಲಕ್ಷಕ್ಕೆ ಚನ್ನರಾಯಪಟ್ಟಣದ ಹಣತಿ ಗ್ರಾಮದ ಅಯ್ಯಣ್ಣ ಎಂಬವರು ಪಡೆದುಕೊಂಡರು ಹಾಗೂ ಕಡೆಯದಾಗಿ 11,510ಕ್ಕೆ ಒಂದು ರಾಸು ಬಿಕರಿಯಾಯಿತು. ಹರಾಜು ಪ್ರಕ್ರಿಯೆಯಲ್ಲಿ ಒಟ್ಟಾರೆ 71 ರಾಸುಗಳು ಬಿಕರಿಯಾಗಿದ್ದು, 27,78,331 ಈ ಹರಾಜು ಪ್ರಕ್ರಿಯೆಯಿಂದ ಅಮೃತ ಮಹಲ್ ತಳಿ ಸಂವರ್ಧನ ಕೆಂದ್ರಕ್ಕೆ ಸಂದಾಯವಾಯಿತು. ಹರಾಜು ಪ್ರಕ್ರಿಯೆಯಲ್ಲಿ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ವೆಂಕಟೇಶ್, ಕುಣಕೇನಹಳ್ಳಿ ಕೇಂದ್ರದ ಉಪ ನಿರ್ದೇಶಕ ಡಾ. ಕಾಂತರಾಜ್, ಅಜ್ಜಂಪುರ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ರಾಮಚಂದ್ರಪ್ಪ ಹಾಗೂ ಬೀರೂರು ಸಂವರ್ಧನಾ ಕೇಂದ್ರದ ವೈದ್ಯ ಡಾ. ನವೀನ್ ಪಾಲ್ಗೊಂಡಿದ್ದರು.
150ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೆಚ್ಚಿನ ದರಗಳಿಗೆ ತಮ್ಮ ನೆಚ್ಚಿನ ರಾಸುಗಳನ್ನು ಖರೀದಿಸುವ ಮೂಲಕ ಈ ತಳೀಯ ಮಹತ್ವ ಹಾಗೂ ಕೃಷಿ ಚಟುವಟಿಕೆಯಲ್ಲಿ ಈ ತಳಿ ನೀಡುವ ಹೆಚ್ಚಿನ ಸಹಕಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.
ಶಿಕಾರಿಪುರ, ಸೊರಬ, ಹಾವೇರಿ, ಹಿರೇಕೇರೂರು, ಚಳ್ಳಕೆರೆ, ಹೊಳಲ್ಕೆರೆ, ಅರಸೀಕೆರೆ, ಚನ್ನರಾಯಪಟ್ಟಣ, ದುದ್ದ, ಗಣಸಿ ಮೊದಲಾದ ಕಡೆಯ ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.