ಆಸ್ಪತ್ರೆಗೆ ಶೌಚಾಲಯ ಸೌಲಭ್ಯ ಕಲ್ಪಿಸಲು ಪುರಸಭೆಗೆ ಆಗ್ರಹ
ಕ.ಪ್ರ.ವಾರ್ತೆ, ಬೀರೂರು, ಜೂ.4
ಇಲ್ಲಿನ ಪತ್ರೆ ಕೆ.ಚನ್ನವೀರಪ್ಪಯ್ಯ ಸಾರ್ವಜನಿಕ ಆಸ್ಪತ್ರೆಗೆ ಶೌಚಾಲಯದ ಸೌಲಭ್ಯ ಒದಗಿಸಲು ಪುರಸಭಾ ಆಡಳಿತವನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ಅತ್ಯಂತ ದೊಡ್ಡ ಹೋಬಳಿ ಕೇಂದ್ರ ಬೀರೂರಾಗಿದೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಬೀರೂರು ಸುತ್ತಮುತ್ತಲಿನ ಬಳ್ಳಿಗನೂರು, ಹೂವಿನಹಳ್ಳಿ, ಮುಂಡ್ರೆ, ಹೋಗರೇಹಳ್ಳಿ, ಬಾಸೂರು, ಬೀಸಲೆರೆ, ಅರೇಹಳ್ಳಿ, ಗಿರಿಯಾಪುರ, ಹಿರೇನಲ್ಲೂರು, ಯರೇಹಳ್ಳಿ, ದೋಗೆಹಳ್ಳಿ, ಗಾಳಿಹಳ್ಳಿ, ಜೋಡಿತಿಮ್ಮಾಪುರ, ಹೋರಿತಿಮ್ಮನಹಳ್ಳಿ, ದೊಡ್ಡಘಟ್ಟ, ಹೆಳವರಹಟ್ಟಿ, ಹಂದಿಜೋಗಿಹಟ್ಟಿ, ಬಿ.ಕೊಡಿಹಳ್ಳಿ, ಸೇರಿದಂತೆ 41ಕ್ಕೂ ಹೆಚ್ಚಿನ ಗ್ರಾಮೀಣ ಭಾಗಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದೆ.
ಗರ್ಭಿಣಿಯರು, ಮಕ್ಕಳು, ವೃದ್ಧರು ಸೇರಿ ನೂರಾರು ಜನರು ನಿತ್ಯವು ನಾನಾ ಭಾಗಗಳಿಂದ ರೋಗ ತಪಾಸಣೆಗೆಂದು ಬಂದು ಹೋಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಮಾತ್ರ ಶೌಚಾಲಯ ಸೌಲಭ್ಯವಿದೆ. ಹೋರರೋಗಿಗಳು ಮತ್ತು ಒಳ ರೋಗಿಗಳ ಆರೈಕೆಗೆ ಬರುವ ಜನರು ಮಲ-ಮೂತ್ರ ವಿಸರ್ಜನೆಗೆ ಸ್ಥಳವಿಲ್ಲದೆ ಸಾರ್ವಜನಿಕ ಶೌಚಾಲಯಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಇದರಿಂದ ತೀವ್ರ ತೊಂದರೆಅನುಭವಿಸುವಂತಾಗಿದೆ.
ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆ ಆವರಣದಲ್ಲಿ ಪುರಸಬೆ ವತಿಯಿಂದ ಸೂಕ್ತ ಸ್ಥಳ ಗುರುತಿಸಿ ಸುಲಭ ಶೌಚಾಲಯ ನಿರ್ಮಿಸಿ ಹೋರರೋಗಳು ಮತ್ತು ರೋಗಿಗಳ ಆರೈಕೆಗೆ ಬರುವ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಪುರಸಭಾ ಆಡಳಿತವನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

